ಹೊಸ ಫೀಲ್ಡ್ ಗೆ ಎಂಟ್ರಿ ಕೊಟ್ಟಿರುವ ರೌಡಿ ಬೇಬಿ ಅಮೂಲ್ಯ
ಇತ್ತೀಚೆಗಿನ ದಿನಗಳಲ್ಲಿ ಕಿರುತೆರೆ ನಟಿಯರು ತಮ್ಮದೇ ಯೂ ಟ್ಯೂಬ್ ಚಾನೆಲ್ ಮೂಲಕ ಬ್ಯೂಟಿ ಟಿಪ್ಸ್, ಹೆಲ್ತ್ ಅಥವಾ ಅಡುಗೆ ರೆಸಿಪಿಗಳ ವಿಡಿಯೋ ಮಾಡುವುದು ಕಾಮನ್ ಆಗಿದೆ. ಇದಕ್ಕೆ ನಟಿ ಮೇಘಾ ಶೆಟ್ಟಿ, ಅಮೃತಾ ರಾಮಮೂರ್ತಿ, ವೈಷ್ಣವಿ ಗೌಡ ಮುಂತಾದವರು ಉದಾಹರಣೆ.ಈ ನಟಿಯರು ಯೂ ಟ್ಯೂಬ್ ಮೂಲಕ ಕ್ಲಿಕ್ ಆಗಿದ್ದಾರೆ.
ಈ ಸಾಲಿಗೆ ಈಗ ನಿಶಾ ಕೂಡಾ ಸೇರ್ಪಡೆಯಾಗಿದ್ದಾರೆ. ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ನಿಶಾ ಈ ವೇಳೆ ಯೂ ಟ್ಯೂಬ್ ಚಾನೆಲ್ ಆರಂಭಿಸುತ್ತಿರುವುದಾಗಿ ಮಾಹಿತಿ ನೀಡಿದ್ದರು. ಇದೀಗ ತಮ್ಮ ತಾಯಿಯೊಂದಿಗೆ ಅಡುಗೆ ಮಾಡುವ ವಿಡಿಯೋ ಪ್ರಕಟಿಸುವ ಮೂಲಕ ಹೊಸ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ.