ರಾಜ ರಾಣಿ ಶೋನಿಂದ ಹೊರಹೋಗಿದ್ದೇಕೆ? ಸ್ಪಷ್ಟನೆ ಕೊಟ್ಟ ಅನುಪಮಾ ಗೌಡ
ರಾಜ ರಾಣಿ ಶೋನಲ್ಲಿ ನಾನು ಯಾಕೆ ಈ ಬಾರಿ ಇಲ್ಲ ಎಂಬುದು ನನಗೂ ಗೊತ್ತಿಲ್ಲ. ಕಾಲ್ ಬಂದಿದ್ದರೆ ಖಂಡಿತವಾಗಿ ಇಷ್ಟಪಟ್ಟು ನಿರೂಪಣೆ ಮಾಡುತ್ತಿದ್ದೆ. ನಾನಾಗಿಯೇ ಈ ಶೋನಿಂದ ಹೊರಬಂದಿಲ್ಲ. ವೈಯಕ್ತಿಕವಾಗಿ ನಾನು ಬೇರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಿದ್ದೆ. ಹಾಗಿದ್ದರೂ ಕೆಲವು ವಿಚಾರಗಳ ಬಗ್ಗೆ ಮಾತನಾಡಲು ನಾನು ಇಲ್ಲಿ ಇಷ್ಟಪಡುವುದಿಲ್ಲ. ಇಲ್ಲಿ ಅವುಗಳನ್ನು ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.