ಮದುವೆ ಬಗ್ಗೆ ಮೌನ ಮುರಿದ ನಿತ್ಯಾ ಮೆನನ್
ನಿತ್ಯಾ ಮಲಯಾಳಂ ಜನಪ್ರಿಯ ನಟನೊಂದಿಗೆ ಡೇಟಿಂಗ್ ನಡೆಸುತ್ತಿದ್ದು, ಸದ್ಯದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿತ್ಯಾ ಇದೆಲ್ಲಾ ಸುಳ್ಳು ಸುದ್ದಿ ಎಂದಿದ್ದಾರೆ. ಆ ಮೂಲಕ ಮದುವೆ ಬಗ್ಗೆ ಹರಡಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಡಿರುವ ಸುದ್ದಿಗಳು ಸತ್ಯಕ್ಕೆ ದೂರವಾದುದು. ಸುದ್ದಿ ಹರಡುವ ಮೊದಲು ನನ್ನಲ್ಲಿ ನಿಜಾಂಶ ತಿಳಿದುಕೊಂಡು ಬರೆದುಕೊಳ್ಳಿ ಎಂದು ನಿತ್ಯಾ ಪ್ರತಿಕ್ರಿಯಿಸಿದ್ದಾರೆ.