ಹೈದರಾಬಾದ್ : ಯೂತ್ ಸ್ಟಾರ್ ನಿತಿನ್ ಅವರು ತಮ್ಮ ವೃತ್ತಿ ಜೀವನದಲ್ಲಿ ಹಿಂದೆಂದೂ ಮಾಡದಂತಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹಾಗಾಗಿ ಅವರ ಮೇಕಪ್ ಗಾಗಿ ಬಾಲಿವುಡ್ ನ ಪ್ರಸಿದ್ಧ ಮೇಕಪ್ ಕಲಾವಿದನನ್ನು ಕರೆತರಲಾಗುತ್ತಿದೆಯಂತೆ.
ಪವರ್ ಪೇಟ್ ಚಿತ್ರದಲ್ಲಿ ನಿತಿನ್ 60 ವರ್ಷದ ವ್ಯಕ್ತಿಯಾಗಿ ನಟಿಸಲಿದ್ದಾರಂತೆ. ಕೃಷ್ಣ ಚೈತನ್ಯ ನಿರ್ದೇಶನದ ಈ ಚಿತ್ರದ ಕಥಾಹಂದರವು ನಾಲ್ಕು ದಶಕಗಳ ಪ್ರಯಾಣದ ಬಗ್ಗೆ ಎನ್ನಲಾಗಿದೆ. ಹಾಗಾಗಿ ಈ ಚಿತ್ರದಲ್ಲಿ ನಿತಿನ್ ಅವರಿಗೆ ಮೇಕಪ್ ಮಾಡಲು ಬಾಲಿವುಡ್ ನ ಪ್ರಸಿದ್ಧ ಮೇಕಪ್ ಕಲಾವಿದ ರಶೀದ್ ಅವರನ್ನು ಕರೆತರಲಾಗುತ್ತಿದೆಯಂತೆ.