ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ. ನಾಳೆ ಅವರ ಹುಟ್ಟುಹಬ್ಬವಿದ್ದು, ಯಾವುದೇ ಗೌಜಿ ಗದ್ದಲಗಳಿಲ್ಲದೆ ಸುಮ್ಮನಿರಲು ಶಿವಣ್ಣ ನಿರ್ಧರಿಸಿದ್ದಾರೆ.
ಅದಕ್ಕೆ ಕಾರಣ ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಸಾವು. ಕೇಕ್ ಕಟ್ ಮಾಡಿ, ಹಾರ ತುರಾಯಿ ಹಾಕುವ ಬದಲು ಶಿವಣ್ಣ ಕಡೆಯಿಂದ ಈ ಬಾರಿ ಸಮಾಜ ಸೇವೆ ನಡೆಯಲಿದೆ. ಅವರ ಅಭಿನಯದ ‘ಟಗರು’ ಚಿತ್ರತಂಡ ಹುಟ್ಟುಹಬ್ಬದ ಪ್ರಯುಕ್ತ ಸ್ವಲ್ಪ ಮೊತ್ತದ ಹಣವನ್ನು ದೇಣಿಗೆಯಾಗಿ ನೀಡಿದೆ.
ಅಲ್ಲದೆ, ರಾಜ್ಯ ಸಶಸ್ತ್ರ ಮೀಸಲು ಪೊಲೀಸ್ ಪಡೆಗೂ 1 ಲಕ್ಷ ರೂ. ದೇಣಿಗೆ ನೀಡಿದೆ. ಹೀಗಾಗಿ ಅವರ ಮನೆ ಮುಂದೆ ಈ ಬಾರಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಸಾಲು ನಿಲ್ಲಬೇಕಿಲ್ಲ. ಅಮ್ಮನ ಸಾವಿಗೆ ಈ ರೀತಿ ಶಿವಣ್ಣ ಗೌರವ ಸಲ್ಲಿಸಲಿದ್ದಾರೆ.