ಟ್ರೇಲರ್ ಇಲ್ಲದೆ ಥಿಯೇಟರ್‌ಗೆ ಎರಗುತ್ತಿರುವ ’ಹೆಬ್ಬುಲಿ’

ಮಂಗಳವಾರ, 21 ಫೆಬ್ರವರಿ 2017 (13:50 IST)
ಯಾವುದೇ ಸಿನಿಮಾಗೆ ಟ್ರೇಲರ್ ಎಂಬುದು ಆಮಂತ್ರಣ ಪತ್ರ ಇದ್ದಂತೆ. ಆಮಂತ್ರಣ ಪತ್ರ ಎಷ್ಟು ಚೆನ್ನಾಗಿದ್ದರೆ, ಸಿನಿಮಾ ಮೇಲೆ ನಿರೀಕ್ಷೆಗಳು ಅಷ್ಟು ಪವರ್ ಫುಲ್ ಆಗಿರುತ್ತವೆ. ಆಮಂತ್ರಣ ಪತ್ರವೇ ಇಲ್ಲದಿದ್ದರೆ? ಸಿನಿಮಾ ಬಗ್ಗೆ ಇನ್ನಷ್ಟು ಕುತೂಹಲ ಮೂಡಬಹುದೋ ಏನೋ..?
 
ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದ ಟ್ರೇಲರ್ ಇಲ್ಲದಂತೆ ನೇರವಾಗಿ ಥಿಯೇಟರ್‌ಗೆ ದಾಂಗುಡಿ ಇಡುತ್ತಿದೆ. ಈಗ ಟ್ರೇಲರ್ ಬಿಡುಗಡೆ ಎಂಬುದು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಇನ್ನು ಸುದೀಪ್‌ರಂತಹ ಚಿತ್ರ ಎಂದರೆ ಅದು ಅಪಾರ ಖರ್ಚು ವೆಚ್ಚದಿಂದ ಕೂಡಿದ ಬಾಬತ್ತು. ಆ ಗೊಡವೆಯೇ ಬೇಡ ಎಂದು ಟ್ರೇಲರ್ ರಗಳೆ ಇಟ್ಟುಕೊಂಡಿಲ್ಲ ಅನ್ನಿಸುತ್ತದೆ. 
 
ಚಿತ್ರ ಬಿಡುಗಡೆಗೆ ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಈಗ ಟ್ರೇಲರ್ ಬಿಡುಗಡೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಭಾವಿಸಿದಂತಿದೆ ಚಿತ್ರತಂಡ. ಕೃಷ್ಣ ಆಕ್ಷನ್ ಕಟ್ ಹೇಳಿರುವ ಚಿತ್ರ ಇದಾಗಿದ್ದು, ಸುದೀಪ್‌ಗೆ ಅಮಲಾ ಪೌಲ್ ನಾಯಕಿಯಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ