ಕಾಜೋಲ್‌ ಜತೆ ಅಭಿನಯಿಸಿದ್ದ ನೂರ್ ಮಾಲಾಬಿಕಾ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

sampriya

ಸೋಮವಾರ, 10 ಜೂನ್ 2024 (19:38 IST)
Photo By X
ಮುಂಬೈ: ನಟಿ ನೂರ್ ಮಾಲಾಬಿಕಾ ದಾಸ್ ಮುಂಬೈನ ತಮ್ಮ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ನಟಿ ನೂರ್‌ ಅವರು ಬಾಲಿವುಡ್‌ ನಟಿ ಕಾಜೋಲ್‌ ಅವರೊಂದಿಗೆ 2023ರ ಲೀಗಲ್‌ ಡ್ರಾಮಾ, ದೀ ಟ್ರಯರ್‌ ಎಂಬ ಸಿನಿಮಾದಲ್ಲಿ ನಟಿಸಿದ್ದರು. 37 ವರ್ಷದ ನೂರ್‌ ಅವರು ಅಸ್ಸಾಂನಿಂದ ಬಂದು ಮುಂಬೈನಲ್ಲಿ ನೆಲೆಸಿದ್ದರು.

ನೂರ್ ಮಾಲಾಬಿಕಾ ದಾಸ್ ಅವರು ನೆಲೆಸಿದ್ದ ಫ್ಲಾಟ್‌ನಲ್ಲಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೇ ನೂರ್‌ ಅವರ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಎಎನ್‌ಐ ಮಾಡಿದ ಟ್ವೀಟ್‌ನಲ್ಲಿ ಹೀಗಿದೆ: "ನಟಿ ನೂರ್ ಮಾಲಾಬಿಕಾ ದಾಸ್ ಅವರ ದೇಹವು ಅಂಧೇರಿ, ಓಶಿವಾರಾ ಪ್ರದೇಶದಲ್ಲಿನ ಅವರ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನೂರ್ ಮಾಲಾಬಿಕಾ ದಾಸ್ ಅವರು ಮನೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ನೆರೆಹೊರೆಯವರು ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ದೂರು ಕೊಟ್ಟಿದ್ದಾರೆ.

ನೂರ್ ಮಾಲಾಬಿಕಾ ದಾಸ್ ಅವರ ಆಪ್ತ ಸ್ನೇಹಿತ, ನಟ ಅಲೋಕನಾಥ್ ಪಾಠಕ್ ಅವರು ಪ್ರತಿಕ್ರಿಯಿಸಿ, “ನಾನು ಇದರಿಂದ ದುಃಖಿತನಾಗಿದ್ದೇನೆ. ನಾನು ನೂರ್ ಅವರನ್ನು ವರ್ಷಗಳಿಂದ ತಿಳಿದಿದ್ದೇನೆ ಮತ್ತು ಹಲವಾರು ಚಲನಚಿತ್ರಗಳು ಮತ್ತು ಸರಣಿಗಳಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೇನೆ. ಕಳೆದ ತಿಂಗಳವರೆಗೂ ಆಕೆಯ ಕುಟುಂಬ ಮುಂಬೈನಲ್ಲಿ ಆಕೆಯೊಂದಿಗೆ ವಾಸವಾಗಿತ್ತು. ಒಂದು ವಾರದ ಹಿಂದೆ ಕುಟುಂಬವು ಗ್ರಾಮಕ್ಕೆ ಮರಳಿದೆ. ಅವಳು ಈ ಫ್ಲಾಟ್‌ನಲ್ಲಿ ಬಾಡಿಗೆಗೆ ವಾಸಿಸುತ್ತಿದ್ದಳು.

ನೂರ್ ಮಲಾಬಿಕಾ ದಾಸ್ ಅವರು ಸಿಸ್ಕಿಯಾನ್, ವಾಲ್ಕಮನ್, ಟೀಖಿ ಚಟ್ನಿ, ಜಘನ್ಯಾ ಉಪಾಯ ಮತ್ತು ಚರಂಸುಖ್ ಸೇರಿದಂತೆ ಹಿಂದಿ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ದಿ ಟ್ರಯಲ್‌ನಲ್ಲಿ ಕಾಜೋಲ್ ಮತ್ತು ಜಿಸ್ಶು ಸೇನ್‌ಗುಪ್ತಾ ಅವರೊಂದಿಗೆ ಕಾಣಿಸಿಕೊಂಡರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ