ಬಾಲಿವುಡ್ನಲ್ಲಿ ಶಿಸ್ತಿಗೆ ತುಂಬಾ ಆದ್ಯತೆಯಿದೆ. ಕ್ಷುಲ್ಲಕ ಕಾರಣಗಳಿಗಾಗಿ ಕೆಲ ಯಶಸ್ವಿ ನಟಿಯರು ಶೂಟಿಂಗ್ ಕ್ಯಾನ್ಸಲ್ ಮಾಡುವುದುಂಟು. ಆದರೆ, ಇಲ್ಲೊಬ್ಬ ನಟಿಯಿದ್ದಾಳೆ ಕಾಜೋಲ್.. ಅವರ ಶಿಸ್ತುಬದ್ಧ ಜೀವನಕ್ಕೆ ಬಾಲಿವುಡ್ ನಿರ್ಮಾಪಕರು, ನಿರ್ದೇಶಕರು ಸೈ ಎಂದಿದ್ದಾರಂತೆ.
ಜ್ವರವಿದ್ದಾಗಲೂ ಕಾಜೋಲ್ ಶೂಟಿಂಗ್ ಗೆ ತಕ್ಕ ಸಮಯಕ್ಕೆ ಹಾಜರಾಗಿದ್ದರಂತೆ. ಅದೇ ಶಿಸ್ತಿನ ಕಾರಣಕ್ಕೆ ಕಾಜೋಲ್ ಎಂದರೆ ಈಗಲೂ ಜನ ಇಷ್ಟಪಡುತ್ತಾರೆ. ಆಕೆಯ ಕುಚ್ ಕುಚ್ ಹೋತಾ ಹೈ, ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೇ, ಗುಪ್ತ್, ದುಷ್ಮನ್ ಮುಂತಾದ ಚಿತ್ರಗಳನ್ನು ಜನ ಮರೆಯಲು ಸಾಧ್ಯವೇ? ಇಂತಹ ಅಪ್ರತಿಮ ಕಲಾವಿದೆಗೆ ಒಂದು ಸೆಲ್ಯೂಟ್.