ಡ್ರಗ್‍ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಯುವ ನಟ ತಾನೀಶ್ ಅಲ್ಲಾದಿ ಗೆ ನೋಟಿಸ್

ಭಾನುವಾರ, 14 ಮಾರ್ಚ್ 2021 (09:18 IST)
ಹೈದರಾಬಾದ್ : ಕಳೆದ ಕೆಲವು ದಿನಗಳ ಹಿಂದೆ ಡ್ರಗ್ಸ್ ಪ್ರಕರಣಗಳು ಚಿತ್ರರಂಗದಲ್ಲಿ ಕೇಳಿಬರುತ್ತಿದ್ದು, ಹಲವು ಬಾಲಿವುಡ್, ಸ್ಯಾಂಡಲ್ ವುಡ್ ನಟರನ್ನು ಬಂಧಿಸಲಾಗಿತ್ತು. ಇದೀಗ ಡ್ರಗ್‍ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಯುವ ನಟ ತಾನೀಶ್ ಅಲ್ಲಾದಿ ಗೆ ನೋಟಿಸ್ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಡ್ರಗ್ಸ್ ಪ್ರಕರಣದಲ್ಲಿ ಇತ್ತೀಚೆಗೆ ಸ್ಯಾಂಡಲ್ ವುಡ್ ನಿರ್ಮಾಪಕ ಶಂಕರ್ ಗೌಡ ಅವರ ಹೆಸರು ಬೆಳಕಿಗೆ ಬಂದಿದೆ. ಹಾಗಾಗಿ ಶಂಕರ್ ಗೌಡ ಆಯೋಜಿಸಿದ್ದ ರಾತ್ರಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ನಾಲ್ವರಿಗೆ ಪೊಲೀಸರು ನೋಟೀಸ್ ನೀಡಿದ್ದಾರೆ. ಅದರಲ್ಲಿ ನಟ ತಾನೀಶ್ ಅಲ್ಲಾದಿ ಕೂಡ ಒಬ್ಬರು ಎನ್ನಲಾಗಿದೆ. ಹೀಗಾಗಿ ನಟನಿಗೆ ಕೋರ್ಟ್ ಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ