ಹೈದರಾಬಾದ್ : ಶರ್ವಾನಂದ್ ಮತ್ತು ಪ್ರಿಯಾಂಕ ಅರುಲ್ ಮೋಹನ್ ನಟಿಸಿರುವ ಶ್ರೀಕರಂ ಚಿತ್ರ ಪೈರಸಿಗೆ ಬಲಿಯಾಗಿದೆ ಎಂಬುದಾಗಿ ತಿಳಿದುಬಂದಿದೆ.
ಮಾರ್ಚ್ 11ರಂದು ಮಹಾಶಿವರಾತ್ರಿಯ ದಿನದಂದು ಬಿಡುಗಡೆಯಾದ ಶ್ರೀಕರಂ ಚಿತ್ರಕ್ಕೆ ಜನರಿಂದ ಸಕರಾತ್ಮಕ ಪ್ರತಿಕ್ರಿಯೆ ದೊರಕಿದೆ. ರೈತರ ಸಮಸ್ಯೆಯನ್ನು ಆಧರಿಸಿದ ಈ ಚಲನಚಿತ್ರವನ್ನು ರಚಿಸಲಾಗಿದೆ.
ಆದರೆ ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವೆಬ್ ಸೈಟ್ ತಮಿಳುರಾಕರ್ಸ್ ಆನ್ ಲೈನ್ ನಲ್ಲಿ ಚಿತ್ರವನ್ನು ಬಹಿರಂಗಪಡಿಸಿದ್ದಾರೆ. ಇದರಿಂದ ಚಿತ್ರದ ಸಂಗ್ರಹದ ಮೇಲೆ ಪರಿಣಾಮ ಬೀರುವ ಭಯ ನಿರ್ಮಾಪಕರನ್ನು ಕಾಡುತ್ತಿದೆ ಎನ್ನಲಾಗಿದೆ.