ಇನ್ನೂ ಮುಗಿದಿಲ್ಲ ಬಿಗ್ ಬಾಸ್ ಸೀಸನ್-3 ಅಭ್ಯರ್ಥಿಗಳ್ಯಾರು ಅನ್ನೋ ಗೊಂದಲ?

ಮಂಗಳವಾರ, 6 ಅಕ್ಟೋಬರ್ 2015 (10:57 IST)
ಸ್ಯಾಂಡಲ್ ವುಡ್ ಅಂಗಳದಲ್ಲಿ ಬಿಗ್ ಬಾಸ್ ಸೀಸನ್-3 ಬಗ್ಗೆ ದಿನಕ್ಕೊಂದು ರೀತಿಯಲ್ಲಿ ಚರ್ಚೆಯಾಗುತ್ತಿದೆ. ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ ಅನ್ನೋ ಗೊದಂಲ ಇನ್ನೂ ಬಗೆಹರಿದಿಲ್ಲ. ಮೊನ್ನೆ ಮೊನ್ನೆಯಷ್ಟೇ ಶೋದಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ ಅನ್ನೋ ಬಗ್ಗೆ ಪಟ್ಟಿಯೊಂದು ಬಿಡುಗಡೆಯಾಗಿತ್ತು. ಆದ್ರೀಗ ಆ ಪಟ್ಟಯಲ್ಲಿ ಹೆಸರಿರಿದ್ದ ಕೆಲ ತಾರೆಯರು ನಾವು ಬಿಗ್ ಬಾಸ್ ಸೀಸನ್-3 ಹೋಗುತ್ತಿಲ್ಲ  ಎಂದಿದ್ದಾರೆ.
ಈ ಹಿಂದೆ ಬಿಡುಗಡೆಯಾದ ಪಟ್ಟಿಯಲ್ಲಿ ರಕ್ಷಿತ್ ಶೆಟ್ಟಿ, ನೀನಾಸಂ ಸತೀಶ್, ಹುಚ್ಚ ವೆಂಕಟ್ ,ಶೀತಲ್ ಶೆಟ್ಟಿ ಮುಂತಾದವರ ಹೆಸರಿತ್ತು. ಆದ್ರೆ ಈ ಎಲ್ಲರೂ ಕೂಡ ನಾವು ಶೋಗೆ ಹೋಗುತ್ತಿಲ್ಲ ಅನ್ನೋದನ್ನು ಖಚಿತಪಡಿಸಿದ್ದಾರೆ.ರಕ್ಷಿತ್ ಶೆಟ್ಟಿ ಈ ಹಿಂದೆಯೇ ಹತ್ತು ಕೋಟಿ ಕೊಟ್ರೂ ಶೋಗೆ ಹೋಗಲ್ಲ ಎಂದಿದ್ದಾರೆ. ಇದೀಗ ನೀನಾಸಂ ಸತೀಶ್ ಕೂಡ ನಾನು 10 ವರ್ಷದ ಮಟ್ಟಿಗೆ ಶೋಗೆ ಹೋಗಲ್ಲ ಎಂದಿದ್ದಾರೆ. ಇನ್ನು ಶೀತಲ್ ಶೆಟ್ಟಿ ನನಗೆ ಈ ಬಗ್ಗೆ ಕರೆಯೇ ಬಂದಿಲ್ಲ ಎಂದಿದ್ದಾರೆ. ಹುಚ್ಚ ವೆಂಕಟ್ ನನ್ನ ಷರತ್ತುಗಳಿಗೆ ಒಪ್ಪಿದ್ರೆ ಮಾತ್ರ ಬಿಗ್ ಬಾಸ್ ಮನೆ ಪ್ರವೇಶ ಮಾಡುತ್ತೇನೆ ಎಂದಿದ್ದಾರೆ.
 
ಸದ್ಯ ಇವರೆಲ್ಲಾ ಹೇಳ್ತಿರೋದು ನೋಡಿದ್ರೆ ಬಿಗ್ ಬಾಸ್ ಮನೆ ಹೊಕ್ಕೋರ್ಯಾರು ಅನ್ನೋ ಕುತೂಹಲ ಹೆಚ್ಚಾಗುತ್ತಲೇ ಇದೆ. ಹಾಗಾದ್ರೆ ಅಸಲೀ ಪಟ್ಟಿ ಯಾವ್ಯಗ ರಿಲೀಸ್ ಆಗುತ್ತೆ ಅನ್ನೋ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಆದ್ರೆ ಇದಕ್ಕೆಲ್ಲಾ ಉತ್ತರ ಕಾರ್ಯಕ್ರಮ ಆರಂಭವಾದ ಮೇಲೆಯೇ ಸಿಗಲಿದೆಯೇನೋ ಅನ್ನೋದು ಕೆಲವರ ಯೋಚನೆ.

ವೆಬ್ದುನಿಯಾವನ್ನು ಓದಿ