ಅಣ್ಣಾ ಅಂತ ತಬ್ಬುತ್ತಿದ್ದ ಇಬ್ಬರು ಹೆಣವಾದರೇ: ಜಗ್ಗೇಶ್ ಉದ್ಘಾರ

ಸೋಮವಾರ, 7 ನವೆಂಬರ್ 2016 (17:32 IST)
ಬಡವರ ಮಕ್ಕಳನ್ನು ತಳ್ಳಿ ಆಳನೋಡಿಬಿಟ್ಟೆಯಲ್ಲ ಎಂದು ಸಾಹಸನಿರ್ದೇಶಕ ರವಿವರ್ಮಾಗೆ ಜಗ್ಗೇಶ್ ಮರುಕ ವ್ಯಕ್ತಪಡಿಸಿದ್ದಾರೆ.
 
ಎದುರಿಗೆ ಸಿಕ್ಕರೆ ಅಣ್ಣಾ ಎಂದು ಕರೆದು ತಬ್ಬುತ್ತಿದ್ದ ಇಬ್ಬರು ಹೆಣವಾದರೇ ಎಂದು ಎಂದು ಶೋಕ ವ್ಯಕ್ತಪಡಿಸಿದ್ದಾರೆ. ನಿನ್ನ ಡಬ್ಬಾ ಸಾಹಸಕ್ಕೆ ಮಕ್ಕಳು ಹೋಗಿ ಬಿಟ್ಟರು ಅಯ್ಯೋ ದೇವರೆ ಎಂದು ಕಣ್ಣೀರುಗೆರೆದಿದ್ದಾರೆ
 
ಎರಡು ತುತ್ತಿಗಾಗಿ ದೇಹ ದಣಿಸಿ ತಯಾರಾಗಿದ್ದರು. ಅಂತಹ ಮಕ್ಕಳನ್ನು ಒಂದೇ ಒಂದು ಕ್ಷಣದಲ್ಲಿ ಇಲ್ಲವಾಗಿಸಿಬಿಟ್ಟರು ಎಂದು ಜಗ್ಗೇಶ್ ಟ್ವಿಟ್ಟರ್‌ನಲ್ಲಿ ತಮ್ಮ ಶೋಕ ಸಂದೇಶ ಪೋಸ್ಟ್ ಮಾಡಿದ್ದಾರೆ.
 
ಚಿತ್ರದ ಶೂಟಿಂಗ್ ಆರಂಭವಾಗುವ ಮುನ್ನ ಸಾಹಸ ನಿರ್ದೇಶಕ ರವಿವರ್ಮಾ, ಇದು ನನ್ನ ಸಿನೆಮಾ ಜೀವನದಲ್ಲಿ ಎರಡನೇ ಹೆವಿ ರಿಸ್ಕ್ ಎಂದು ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ