ಈ ಬಗ್ಗೆ ನೀನಾಸಂ ಸತೀಶ್ ಈ ಬಗ್ಗೆ ಮಾತನಾಡುತ್ತ ಈ ಹಾಡಿನ ಚಿತ್ರೀಕರಣ ಆಗುವಾಗ ಇಡಿ ತಂಡ ನಗುವುದನ್ನು ನಿಲ್ಲಿಸಿರಲಿಲ್ಲ. ಆ ಹಾಡಲ್ಲಿ ಎಂಬತ್ತರ ದಶಕದ ಶೈಲಿ ಇದ್ದು, ರೆಟ್ರೋ ಕಾಸ್ಟೂಮ್ ನ್ನು ಧರಿಸಿ ಆ ಹಾಡಿಗೆ ನಮ್ಮನ್ನು ತೊಡಗಿಸಿಕೊಂಡೆವು. ಎಂಬತ್ತರ ದಶಕದಲ್ಲಿ ಅಂಬರೀಶ್ , ರಾಜ್ ಕುಮಾರ್, ವಿಷ್ಣು ಸರ್, ಶಿವಣ್ಣ ಮತ್ತು ಶಂಕರ್ ಚಿತ್ರಗಳನ್ನು ಹೋಲುವಂತೆ ಚಿತ್ರೀಕರಣ ಮಾಡಲಾಯಿತು.
ಈ ಹಾಡಲ್ಲಿ ನಾನು ಹಾಗು ಸಿಂಧು ಆರು ಅಡಿ ಚೇರಿಂದ ಜಿಗಿದೆವು, ಬೆಟ್ಟದ ಮೇಲಿಂದ ಉರುಳಿದೆವು. ಇವೆಲ್ಲ ಚಿತ್ರದಲ್ಲಿ ನೋಡುವಾಗ ಚಂದ ಅನ್ನಿಸುತ್ತದೆ. ಆದರೆ ನಿಜಕ್ಕೂ ಅಂತಹ ಶೂಟಿಂಗ್ ನಲ್ಲಿ ಭಾಗವಹಿಸುವುದು ಮಾತ್ರ ಅತ್ಯಂತ ತ್ರಾಸದಾಯಕ ಎಂದು ಈ ಸಮಯದಲ್ಲಿ ಹೇಳಿದ್ದಾರೆ ಸತೀಶ್. ಈ ಚಿತ್ರದ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದು. ಆಗಿನ ಕಾಲದ ಕಲಾವಿದರು ಯಾವ ರೀತಿ ಕಠಿಣ ಶ್ರಮ ವಹಿಸುತ್ತಿದ್ದರು ಎನ್ನುವುದು ಸ್ಪಷ್ಟ ಪಡಿಸುತ್ತದೆ ಎನ್ನುವ ಮಾತು ನೀನಾಸಂ ಸತೀಶ್ ಅವರಿಂದ ಹೊರ ಬಂದಿದೆ. ಆದ್ದರಿಂದ ತಾನೆ ಹಳೆಯ ಚಿತ್ರಗಳು ಜನರ ಮನದಲ್ಲಿ ಸ್ಥಿರವಾಗಿರುವುದು!