ಮತ್ತೊಂದು ದಾಖಲೆ ಬರೆದ ಓಂ ಸಿನಿಮಾ

ಮಂಗಳವಾರ, 4 ಆಗಸ್ಟ್ 2015 (10:40 IST)
ಓಂ ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿನಿಮಾ. ಸಿನಿಮಾ ಬಿಡುಗಡೆಯಾದಾಗಿನಿಂದ ಇಲ್ಲಿವರೆಗೆ ದಾಖಲೆಗಳ ಮೇಲೆ ದಾಖಲೆಗಳನ್ನ ಮಾಡಿದೆ.  ಉಪೇಂದ್ರ ನಿರ್ದೇಶನದ, ಶಿವರಾಜ್ ಕುಮಾರ್- ಪ್ರೇಮಾ ನಟನೆಯ ಓಂ ಚಿತ್ರ ಇದೂವರೆದೂ ಅತಿಹೆಚ್ಚು ಬಾರಿ ರೀ-ರಿಲೀಸ್  ಆಗಿದೆ. ಇದು ಭಾರತೀಯ ಸಿನಿಮಾ ರಂಗದಲ್ಲೇ ಒಂದು  ವಿಶಿಷ್ಟ ದಾಖಲೆ ನಿರ್ಮಿಸಿದೆ. ಓಂ ಸಿನಿಮಾಗೆ 20ವರ್ಷ ಕಳೆದ್ರೂ ಬೇಡಿಕೆ ಮಾತ್ರ ಕುಗ್ಗಿಲ್ಲ. ಇವತ್ತಿಗೂ ಫಿಲಂ ರಿಲೀಸ್ ಆದ್ರೆ ಪ್ರೇಕ್ಷಕರ್ ಹೌಸ್ ಫುಲ್ ಆಗ್ತಾರೆ. ಇದ್ರಿಂದಾಗಿಯೇ ಸಿನಿಮಾದ ಸ್ಯಾಟ್ ಲೈಟ್ ರೈಟ್ಸ್ ನ ಇಲ್ಲಿವರೆಗೂ ಸೇಲ್ ಮಾಡಿರಲಿಲ್ಲ. ಇತ್ತೀಚಿಗಷ್ಟೇ ಹೊಸ ತಂತ್ರಜ್ಞಾನದೊಂದಿಗೆ  ಮರು ಬಿಡುಗಡೆಯಾಗಿದ್ದ  ಓಂ ಮತ್ತೆ ಕಮಾಲ್ ಮಾಡಿತ್ತು. 
ಸತ್ಯಕಥೆ ಆಧಾರಿತ ಸಿನಿಮಾ ಇವತ್ತಿಗೂ ಸಿನಿ ಮಾರ್ಕೆಟ್ ನಲ್ಲಿ ಹಾಟ್ ಕೇಕ್. ಸಿನಿಮಾ ರಿಲೀಸ್ ಆಯ್ತು ಅಂದ್ರೆ ಥಿಯೇಟರ್ ಗಳು ತುಂಬಿಹೋಗ್ತಾವೆ. ಇಲ್ಲಿವರೆಗೂ ಓಂ ಸಿನಿಮಾ ತನ್ನ ಸ್ಯಾಟ್ ಲೈಟ್  ರೈಟ್ಸ್ ಅನ್ನ ಸೇಲ್ ಮಾಡಿರಲಿಲ್ಲ. ಹೀಗಾಗಿ ಥಿಯೇಟರ್ ಗೆ ಸಿನಿಮಾ ಬಂತು ಅಂದ್ರೆ ಟಿಕೆಟ್ ಸಿಗೋದೇ ಕಷ್ಟ.  ಆದ್ರೆ ಇದೀಗ ವಜ್ರೇಶ್ವರಿ ಕಂಬೈನ್ಸ್ 20 ವರ್ಷಗಳ ನಂತ್ರ ಓಂ ಸಿನಿಮಾವನ್ನ ಖಾಸಗಿ ವಾಹಿನಿಯೊಂದಕ್ಕೆ ಸೇಲ್ ಮಾಡಿದೆ. ಎರಡು ದಶಕಗಳ ಹಿಂದಿನ ಓಂ ಚಿತ್ರದ ಸ್ಯಾಟ್ ಲೈಟ್ ರೈಟ್ಸ್  ಬರೊಬ್ಬರಿ 10ಕೋಟಿ ರೂಪಾಯಿಗೆ ಮಾರಾಟವಾಗಿದೆ. ಈ ಲೆಕ್ಕದಲ್ಲೂ  ಓಂ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. 
 
20 ವರ್ಷಗಳ ನಂತ್ರ ಸ್ಯಾಟ್ ಲೈಟ್ ರೈಟ್ ಮಾರಾಟ ಮಾಡಿರೋ ವಜ್ರೇಶ್ವರಿ ಕಂಬೈನ್ಸ್ ಇದ್ರಲ್ಲೂ ಸಖತ್ ಲಾಭಗಳಿಸಿದೆ. ಇನ್ನು ಸಿನಿಮಾವನ್ನ ನೋಡದ ಮತ್ತು ಹೊಸತಲೆಮಾರಿನ ಜನತೆಗೆ ಕಿರುತೆರೆಯಲ್ಲಿ ನೋಡಿ ಎಂಜಾಯ್ ಮಾಡೋ ಅವಕಾಶ ಸಿಕ್ಕಿದಂತಾಗಿದೆ. 

ವೆಬ್ದುನಿಯಾವನ್ನು ಓದಿ