ಸೇಡು-ಪ್ರತೀಕಾರದ ಸುತ್ತ ಸಾಗುವ ’ಎಳೆನೀರು’

ಸೋಮವಾರ, 27 ಫೆಬ್ರವರಿ 2017 (10:53 IST)
ಸಮಾಜದಲ್ಲಿ ಗಂಡು ಮಾತ್ರ ಕೆಟ್ಟವನಲ್ಲ, ಹೆಂಗಸರಲ್ಲೂ ಅಸಹಾಯಕರಿದ್ದಂತೇ ಕೆಟ್ಟವರೂ ಇರುತ್ತಾರೆ. ಸಮಯ ಸಂದರ್ಭದಲ್ಲಿ ಮನುಷ್ಯನನ್ನು ಬದಲಾಯಿಸುತ್ತದೆ ಎಂಬುದನ್ನು ಅತ್ಯಾಚಾರಕ್ಕೊಳಗಾದ ಮಹಿಳೆ ಸೇಡಿಗಾಗಿ ಮತ್ತೊಬ್ಬ ಅಮಾಯಕ ಹುಡುಗನ ತಲೆಕೆಡಿಸಿ, ತನ್ನ ಹಿಂದೆ ಬಿದ್ದಾಗ ಅವನಿಗೆ ಆಸಿಡ್ ಎರಚಿ ಅಂಧನನ್ನಾಗಿ ಮಾಡಿದ  ಮಹಿಳೆಯೊಬ್ಬಳ ಕತೆ ಹೇಳುವ ಚಿತ್ರ ಎಳನೀರು. 
 
ಈ ಚಿತ್ರಕ್ಕೆ ಗಡಿನಾಡು ರಾಯಚೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಇದೇ ತಿಂಗಳ ಎರಡನೇ ವಾರ ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ. ಓಂ ಪ್ರಕಾಶ್ ನಾಯಕ್ ಮತ್ತು ಗೋಪಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಶಂಕರ್ ಛಾಯಾಗ್ರಹಣ, ಯುಗಂತ್ ಸಂಗೀತ, ರಾಜಶೇಖರ್ ರೆಡ್ಡಿ ಸಂಕಲನ, ವೆಂಕಟೇಶ್ ಬಾಬು, ಅರ್ಜುನ್ 
ಸಹನಿರ್ದೇಶನವಿದೆ. 
 
ಓಂ ಪ್ರಕಾಶ್, ಕಾಮನಾ ಸಿಂಗ್, ನೇಹಾ ಬನ್ಸಾಲ್, ಆಕಾಶ್, ವೀರೆಂದ್ರ ಮಿಶ್ರಾ, ರಾಮು ರಾಯಚೂರು, ಸಂತೋಷ್, ಬಳ್ಳಾರಿ ಮಂಜು, ರೂಪಾಸಿಂಗ್, ಮೋಹನ್ ಮುಂತಾದವರ ತಾರಾಬಳಗವಿದೆ. ಸಮರ್ಥ್ ಕ್ರಿಯೇಷನ್ಸ್ ಲಾಂಛನದಲ್ಲಿ ಗೋಪಿಶಾಸ್ತ್ರಿ ನಿರ್ಮಿಸಿರುವ ಚಿತ್ರ ’ಎಳೆನೀರು’.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ