ಓಂ ಸಾಯಿಪ್ರಕಾಶ್ 99ನೇ ಚಿತ್ರಕ್ಕೆ ಮುಹೂರ್ತ ನಿಗದಿ

ಮಂಗಳವಾರ, 14 ಫೆಬ್ರವರಿ 2017 (11:35 IST)
ಅಬ್ಬೆ ತುಮಕೂರು (ಯಾದಗಿರಿ ಜಿಲ್ಲೆಯಲ್ಲಿರುವ ಸಣ್ಣ ಗ್ರಾಮ) ಶ್ರೀ ವಿಶ್ವಾರಾಧ್ಯ ಸಿದ್ದಿಪುರುಷರ ಪ್ರಸಿದ್ದತೆಯನ್ನು ಸಾರುವ ಚಿತ್ರ ಸಿದ್ದಿಪುರುಷ ವಿಶ್ವಾರಾಧ್ಯ. ಓಂ ಸಾಯಿ ಪ್ರಕಾಶ್ ಅವರ 99ನೇ ಸಿನಿಮಾ ನಿರ್ದೇಶನ ಆಗಲಿದೆ. ಮಾರ್ಚ್ 3 ರಂದು ಈ ಚಿತ್ರಕ್ಕೆ ಚಾಲನೆ ದೊರಕಲಿದೆ. 
 
ವಿಶ್ವ ಗಂಗ ಪ್ರೊಡಕ್ಷನ್ ಅಡಿಯಲ್ಲಿ ಈ ಚಿತ್ರದ ಶೀರ್ಷಿಕೆ ನೋಂದಾವಣಿ ಆಗಿದೆ. ಶ್ರೀ ವಿಶ್ವಾರಾಧ್ಯ ಸಿದ್ದಿ ಸಂಸ್ಥಾನ ಮಠ ಯಾದಗಿರಿಯ ಬಳಿ ಇರುವ ದೇವಸ್ಥಾನ ಅಬ್ಬೆ ತುಮಕೂರು ಗ್ರಾಮದಲ್ಲಿ ನೆಲಸಿದೆ. ಅಲ್ಲಿಯ ಪ್ರಸಿದ್ದ ವ್ಯಕ್ತಿ ಅಂದರೆ ಜೀವಂತ ಸಮಾಧಿ ಆದ ಶ್ರೀ ವಿಶ್ವಾರಾಧ್ಯ ಸಿದ್ದಿಪುರುಷರು. 
 
ಮಹಾಶಿವರಾತ್ರಿಯ ಸಮಯದಲ್ಲಿ ಇಲ್ಲಿ ನಡೆಯುವ ಜಾತ್ರೆಗೆ ಭಕ್ತಾದಿಗಳು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳು ನಾಡು ರಾಜ್ಯಗಳಿದ ಧಾವಿಸಿ ಶ್ರೀ ವಿಶ್ವಾರಾಧ್ಯರ ಸಂಸ್ಥಾನದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ಶ್ರೀ ವಿಶ್ವಾರಾಧ್ಯರು ಈಗಲೂ ಸಕಲ ಸಂಕಷ್ಟಗಳನ್ನು ಭಕ್ತಾಧಿಗಳಿಗೆ ಪರಿಹರಿಸಿರುವ ಉದಾಹರಣೆಗಳಿವೆ.
 
ಇಂತಹ ಸಿದ್ದಿಪುರುಷರ ಅನೇಕ ಪವಾಡಗಳು ಈಗಲೂ ಪ್ರಚಲಿತ. ಶ್ರೀ ವಿಶ್ವಾರಾಧ್ಯ ಸ್ವಾಮಿಗಳ ಬಗ್ಗೆ ಹಲವಾರು ವಿಚಾರಗಳನ್ನು ಪರದೆಯ ಮೇಲೆ ತರಲು ಸಕಲ ಸಿದ್ದತೆ ಮಾಡಿಕೊಳ್ಳುತ್ತ ಇದ್ದಾರೆ ಹಿರಿಯ ನಿರ್ದೇಶಕ ಸಾಯಿಪ್ರಕಾಶ್. ಅವರು 200 ಸಿನಿಮಾಗಳ ನಟ  ಸಾಯಿಕುಮಾರ್ ಅವರನ್ನು ಶ್ರೀ ವಿಶ್ವರಾಧ್ಯ ಪಾತ್ರಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ.
 
ಈ ಚಿತ್ರವನ್ನು ಪರಮಪೂಜ್ಯ ಡಾ.ಗಂಗಾಧರ ಮಹಾಸ್ವಾಮಿಗಳು, ಶ್ರೀ ವಿಶ್ವರಾಧ್ಯ ಸಿದ್ದ ಸಂಸ್ಥಾನ ಮಠ ನಿರ್ಮಾಣ ಮಾಡಲಿದೆ. ಈ ಚಿತ್ರದ ಶೀರ್ಷಿಕೆ ಪರಿಚಯಿಸುವ ಕಾರ್ಯಕ್ರಮದಲ್ಲಿ ಮಾಜಿ ಪೆÇಲೀಸ್ ಅಧಿಕಾರಿ ಶಂಕರ್ ಬಿದ್ರಿ, ಡಾ ಎ ವಿ ಮಲಕ ರೆಡ್ಡಿ ಶಾಸಕರು, ಗುರು ಪಾಟೀಲ್ ಷಾಹಾಪೂರ ಶಾಸಕರು, ವೀರ ಬಸವನಾತ ರೆಡ್ಡಿ ಮಾಜಿ ಶಾಸಕರು ಹಾಗೂ ಇತರರು ಹಾಜರಿದ್ದರು.  ನಿರ್ದೇಶಕ ಸಾಯಿಪ್ರಕಾಶ್ ಸದ್ಯದಲ್ಲೇ ಕಲಾವಿದರ ಹಾಗೂ ತಾಂತ್ರಿಕ ತಂಡವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ