ಮೂರು ದಿನಗಳ ಕಾಲ ಅಮೇರಿಕಾದ ಸೆರ್ರಾ ಥಿಯೇಟರ್ ನಲ್ಲಿ ಓಂ ಪ್ರದರ್ಶನ

ಶುಕ್ರವಾರ, 31 ಜುಲೈ 2015 (10:32 IST)
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಪರೂಪದ ದಾಖಲೆ ಮಾಡಿದ ಚಿತ್ರ ಓಂ. ಡಾ. ಶಿವರಾಜ್ ಕುಮಾರ್ ಅಭಿನಯದ ಹಾಗೂ ಉಪೇಂದ್ರ ನಿರ್ದೇಶನದ ಚಿತ್ರ ಅಭೂತಪೂರ್ವ ಯಶಸ್ಸು ಗಳಿಸಿತ್ತು. ಈಗ ಆ ಬ್ಲಾಕ್ ಬಸ್ಟರ್ ಚಿತ್ರ ಯುಸ್ ದೇಶದ ಮಿಲಿಪಿಟಾಸ್ನ ಸೆರ್ರಾ ಥಿಯೇಟರ್ ನಲ್ಲಿ ಮೂರು ದಿನಗಳ ಕಾಲ ಪ್ರದರ್ಶಿತವಾಗುತ್ತಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ಚಿತ್ರ ಸರಿಸುಮಾರು 500  ಬಾರಿ ಬೇರೆ ಬೇರೆ ಸ್ಥಳಗಳಲ್ಲಿ ಪ್ರದರ್ಶಿತವಾಗಿದೆ. 
ಕಸ್ತೂರಿ ಮೀಡಿಯಾ ಆಶಿತ ಗೋವರ್ಧನ್ ಮತ್ತು ಅಟ್ಲಾಂಟ ನಾಗೇಂದ್ರ ಅವರು ಡಾ.ರಾಜ್ ಕುಮಾರ್ ಹೋಂ ಬ್ಯಾನರ್ ನಲ್ಲಿ  ತಯಾರಾದ ಚಿತ್ರವನ್ನು  ಬಿಡುಗಡೆ ಮಾಡುತ್ತಿದ್ದಾರೆ. 
 
ಸೆರ್ರ ಥಿಯೇಟರ್ ನಲ್ಲಿ ಈ ಚಿತ್ರ ಜುಲೈ 31 ಅಂದರೆ ಇಂದು ರಾತ್ರಿ 8 ಗಂಟೆಗೆ ಪ್ರದರ್ಶನ ಮಾಡಲಿದೆ. ಅದೇ ರೀತಿ ನಾಳೆ ಅಂದರೇ, 1ಆಗಸ್ಟ್  ಹಾಗೂ ನಾಳಿದ್ದು 2 ಆಗಸ್ಟ್ರಂದು ಸಹಿತ ಈ ಚಿತ್ರ ಪ್ರದರ್ಶಿತವಾಗಲಿದೆ ಎಂದು ಅಟ್ಲಾಂಟ ನಾಗೇಂದ್ರ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. 
 
ಅತ್ಯದ್ಭುತವಾದ ಹಾಡುಗಳಿಗೆ ಹಂಸಲೇಖ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಗೌರಿಶಂಕರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪ್ರೇಮ,ಸಾಧು ಕೋಕಿಲ, ಶ್ರೀ ಶಾಂತಿ, ಹೊನ್ನವಳ್ಳಿ ಕೃಷ್ಣ, ವಿ ಮನೋಹರ್, ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಕೃಷ್ಣ, ಜೇಡರಹಳ್ಳಿ ಕೃಷ್ಣ, ವಾಣಿಶ್ರೀ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ