ಬೆಂಗಳೂರು: ಮಂಗಳೂರು ಮೂಲದ ನಿರ್ಮಾಣ ಸಂಸ್ಥೆಗೆ ನೀಡಿದ್ದ ಚೆಕ್ ಬೌನ್ಸ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನಟಿ ಪದ್ಮಜಾ ರಾವ್ ಗೆ ನ್ಯಾಯಾಲಯ ಮಂಜೂರು ಮಾಡಿದೆ.
ಮಂಗಳೂರಿನ ಜೆಎಂಎಫ್ ಸಿ ನ್ಯಾಯಾಲಯ ಪದ್ಮಜಾ ರಾವ್ ಗೆ ಜಾಮೀನು ಮಂಜೂರು ಮಾಡಿದೆ. ತುಳು ಚಿತ್ರ ನಿರ್ದೇಶಕ ವೀರೇಂದ್ರ ಶೆಟ್ಟಿ ನೀಡಿದ ದೂರಿನನ್ವಯ ಪದ್ಮಜಾ ವಿರುದ್ಧ ಬಂಧನ ವಾರಂಟ್ ಜಾರಿಯಾಗಿತ್ತು. ವಕೀಲರ ಜೊತೆಗೆ ನಟಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.