ಅಕ್ಷಯ್ ಕುಮಾರ್ ಅಭಿನಯದ ಬೇಬಿಗೆ ಪ್ರದರ್ಶನಕ್ಕೆ ಪಾಕ್ ನಿರ್ಭಂಧ

ಶನಿವಾರ, 24 ಜನವರಿ 2015 (10:25 IST)
ಅಕ್ಷಯ್ ಕುಮಾರ್ ಅವರ ನಟನೆಯ ಬಹು ನಿರೀಕ್ಷಿತ ಚಿತ್ರ ಬೇಬಿಯನ್ನು ಪಾಕಿಸ್ತಾನದಲ್ಲಿ ಪ್ರದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ. ನಿನ್ನೆ ಅದು ಪಾಕಿಸ್ತಾನದಲ್ಲಿ ಬಿಡುಗಡೆ ಆಗಬೇಕಿತ್ತು. ಅದಕ್ಕೆ ಮುಖ್ಯ ಕಾರಣ ಆ ದೇಶದ ಸರ್ಕಾರ ಚಿತ್ರವನ್ನು ನಿಷೇಧಿಸಿದೆ.  ಒಂದು ಭಯಂಕರವಾದ ಉಗ್ರಗಾಮಿ ಕಥೆಯ ಹಂದರ ಹೊಂದಿದ್ದು ಅದನ್ನು ಭಾರತದ ಗೂಢಚಾರ ಮಿಶನ್ ಭೇದಿಸುವ ಕೆಲಸ ಮಾಡುತ್ತದೆ. ಈ ಕಥೆಯು ಇಂತಹ ಅಂಶಗಳನ್ನು ಒಳಗೊಂಡಿದೆ. 
ಈ ಚಿತ್ರದಲ್ಲಿ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತರುವಂತಿದೆ ಅಲ್ಲದೆ ಈ ಚಿತ್ರದ ಖಳನಾಯಕರಿಗೆ ಮುಸ್ಲಿಂ ಹೆಸರನ್ನು ಇಡಲಾಗಿದೆ ಎಂದ ಕಾರಣ ಸೆನ್ಸಾರ್ ಬೋರ್ಡ್ ಕಡೆಯಿಂದ ತೀವ್ರವಾದ ಆಕ್ಷೇಪ ವ್ಯಕ್ತವಾಗಿದ್ದು, ಈಗ ಆ ಚಿತ್ರದ ಬಿಡುಗಡೆಯನ್ನು  ಪಾಕಿಸ್ತಾದಲ್ಲಿ ಬಿಡುಗಡೆ ಮಾಡುತ್ತಿಲ್ಲ.
 
ಪಾಕಿಸ್ತಾನಕ್ಕೆ ಸೇರಿದ ಪ್ರಸಿದ್ದ  ಟೀವಿ ನಟ ಮಿಕಾಲ್ ಜುಲ್ಫಿಕರ್ , ರಶೀದ್ ರಾಜ್ ವಿಲನ್ ಪಾತ್ರಧಾರಿಗಳಾಗಿದ್ದಾರೆ. ಈ ಚಿತ್ರಕ್ಕೆ ಸಂಬಂಧಪಟ್ಟ ಡಿವಿಡಿ ಗಳು ಮತ್ತು ಸೀಡಿಗಳನ್ನು  ಸಹಿತ ಇಸ್ಲಾಮಾಬಾದ್ ನಲ್ಲಿ ನಿಷೇಧ ಹೇರಲಾಗಿದೆ. ಈ ಚಿತ್ರ  ಪಾಕಿಸ್ತಾನಿ ವಿರೋಧಿ ಅಂಶಗಳನ್ನು ಹೊಂದಿಲ್ಲ ಎಂದು ನಿರ್ದೇಶಕ ನೀರಜ್ ಪಾಂಡೆ ಅವರು ಈ ಮೊದಲು ತಿಳಿಸಿದ್ದರೂ ಸಹಿತ ಆದರೂ ಅವರು ಚಿತ್ರವನ್ನು ನಿಷೇಧಿಸಿದ್ದಾರೆ. ಪಾಕಿಸ್ತಾನದ ಕಾಮಾಲೆ ಕಣ್ಣಿಗೆ! 

ವೆಬ್ದುನಿಯಾವನ್ನು ಓದಿ