ಪರಪಂಚದಲ್ಲಿ ಯೋಗಿ ಜೊತೆ ರಾಗಿಣಿ ಡ್ಯುಯೆಟ್

ಶುಕ್ರವಾರ, 9 ಮೇ 2014 (10:38 IST)
ಯೋಗರಾಜ್ ಭಟ್ಟರ ನಿರ್ಮಾಣದ ಬಹು ನಿರೀಕ್ಷಿತ ಚಿತ್ರ ಪರಪಂಚ. ಅದರಲ್ಲಿ ದಿಗಂತ್ ಬೆತ್ತಲೆಯಾಗಿ ಓಡಿದ ಬಗ್ಗೆ ಸಾಕಷ್ಟು ಸುದ್ದಿ ಆಗಿತ್ತು. ಈಗ ಮತ್ತೆ ಹೊಸ ಸಂಗತಿಯಿಂದ ಅದು ಸುದ್ದಿ ಮಾಡುತ್ತಿದೆ. 
 
ಯೋಗರಾಜ್ ಭಟ್ ಅವರ ಪರನ್ಚವು ಈಗ ವಿದೇಶಕ್ಕೆ ತೆರಳುತ್ತಿದೆ. ಆದರೆ ಅದರಲ್ಲೇನು ವಿಶೇಷ ಅನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡ ಬಹುದು.. ಆ ಚಿತ್ರದ ಹಾಡಿನ ಚಿತ್ರೀಕರಣ ವಿದೇಶದ ಮಣ್ಣಲ್ಲಿ ಆಗುತ್ತಿದೆ.
 
ಅದು ಬಂಗಾರಿ ಖ್ಯಾತಿಯ ಹಾಗೂ ಮಾಜಿ ಪ್ರೇಮಿಗಳಾದ ಯೋಗೀಶ್ ಮತ್ತು ರಾಗಿಣಿ ದ್ವಿವೇದಿ ಅವರ ಪ್ರಣಯ ಗೀತೆ ಚಿತ್ರಿಸುವ ಕೆಲಸಕ್ಕಾಗಿ ಭಟ್ಟರು ವಿದೇಶಕ್ಕೆ ಹೋಗುತ್ತಿದ್ದಾರೆ ಮೊದಲ ಬಾರಿ! ಇದರಲ್ಲಿ ಅತಿಥಿ ಯಾಗಿ ಕಾಣಿಸಿಕೊಳ್ಳುತ್ತಿರುವ ನಟ ಯೋಗೇಶ್ ಹಾಡಿನಲ್ಲಿ ಮಾತ್ರ ಕಾಣಸಿಗುತ್ತಿದ್ದಾರಂತೆ. 
 
ನಾನು  ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎನ್ನುವ ಸತ್ಯವನ್ನು ಮಾಧ್ಯಮದ ಮುಂದೆ ಹೇಳಿದ್ದಾರೆ ಲೂಸ್ ಮಾದ ಯೋಗಿ. ಈ ಹಾಡು ಬಾರ್ ಮತ್ತು ರೆಸ್ಟುರೆಂಟ್ ನಲ್ಲಿ ಚಿತ್ರೀಕರಣ ಆಗುತ್ತಿದ್ದು, ಆ ಹಾಡಿನ  ತರಕಾರಿಗಳ ಹೆಸರನ್ನು ಹೊಂದಿದೆಯಂತೆ! ಈ ಚಿತ್ರದಲ್ಲಿ ರಾಗಿಣಿ ಬಾರ್ ಗರ್ಲ್  ಆಗಿ ನಟಿಸುತ್ತಿದ್ದಾರೆ.
 
ದಿಗಂತ್ ಆ ಬಾರ್ ನಲ್ಲಿ ಕೆಲಸಕ್ಕೆ ಸೇರಿರುತ್ತಾರೆ. ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ಇದೆ. ಕೃಷ್ ಜೋಷಿ ಈ ಚಿತ್ರದ ನಿರ್ದೇಶಕ. 

ವೆಬ್ದುನಿಯಾವನ್ನು ಓದಿ