ಸ್ಮಿತಾ ಪಾಟೀಲ್‌ರಿಂದ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಪಾಟೇಕರ್

ಮಂಗಳವಾರ, 3 ಮಾರ್ಚ್ 2015 (10:25 IST)
ಹಾಗೆಂದು ನಾನಾ ಪಾಟೇಕರ್ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಭಾರತೀಯ ಚಿತ್ರರಂಗದ ಅಭಿಜಾತ ಕಲಾವಿದ ನಾನ ಪಾಟೇಕರ್ ಅವರು ಬೆಳ್ಳಿತೆರೆ ಹಾಗೂ ರಂಗಭೂಮಿ ಎರಡರಲ್ಲೂ ಸಹಿತ ತಮ್ಮ ಸ್ಥಾನ ಗಟ್ಟಿ ಮಾಡಿಕೊಂಡಿರುವ ಕಲಾವಿದ. ಅವರು ತಮ್ಮ ಪಾಡಿಗೆ ತಾವು ರಂಗಭೂಮಿಯಲ್ಲಿ ಇದ್ದರಂತೆ. ಆದರೆ ಅವರನ್ನು  ಆತ್ಮೀಯ ಗೆಳತಿ ಸ್ಮಿತಾ ಪಾಟೀಲ್ ಚಿತ್ರಗಳಲ್ಲಿ ನಟಿಸಲು ಪ್ರೋತ್ಸಾಹ ನೀಡಿ ನಾನ ಎಂಟ್ರಿ ಆಗುವಂತೆ ಮಾಡಿದರಂತೆ. ನಾನು ನಾಟಕಗಳಲ್ಲಿ ನಟಿಸುತ್ತಾ ಹಾಯಾಗಿದ್ದೆ.ಆದರೆ ಸ್ಮಿತಾ ನನ್ನ ಬಲವಂತ ಮಾಡಿ ಚಿತ್ರಗಳಲ್ಲಿ ನಟಿಸಲು ಹೇಳಿದಳು. 
ಸ್ಮಿತಾ ನನ್ನನ್ನು ರವಿ ಚೋಪ್ರ ಅವರ ಸಿನಿಮಾ ಆಜ್ ಕಿ ಆವಾಜ್ ನಲ್ಲಿ ನಟಿಸಲು ಅವಕಾಶ ಕೊಡಿಸಿದಳು. ಆಕೆ  ನನ್ನ ಅತ್ಯುತ್ತಮ ಗೆಳತಿ. ಆಕೆ ಈಗಿಲ್ಲ, ಆದರೆ ಸ್ಮಿತಾಳನ್ನು ನಾನು ಹೆಚ್ಚು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಈ ಸಮಯದಲ್ಲಿ ಹೇಳಿದ್ದಾರೆ ನಾನ. ಆವಂ ಮತ್ತು ಗಿಧ್ ಚಿತ್ರಗಳಲ್ಲಿ ಸ್ಮಿತಾ ಜೊತೆ ನಾನಾ ಅವರು ಅಭಿನಯಿಸಿದ್ದರು. 
 
ಈಗ ನಾನ ಅವರ ಇತ್ತೀಚಿನ ಅಬ್ ಕಿ ಚಪ್ಪನ್  2  ಚಿತ್ರ ಬಿಡುಗಡೆ ಆಗಿದೆ.ಅವರಿಗೆ ಪಾರ್ಟಿಗಳಲ್ಲಿ ಭಾಗವಹಿಸಲು ಇಷ್ಟವಾಗುವುದಿಲ್ಲವಂತೆ, ಹಾಗಂತ ಹೇಳಿದ್ದಾರೆ. ನನಗೆ ಪಾರ್ಟಿಗಳಿಗೆ ಹೋಗಲು ಇಷ್ಟವಿರಲ್ಲ, ನೇರವಾಗಿ ಮಾತನಾಡಲು ಹೆದರುವ ಅನೇಕರು ಕುಡಿದಾಗ ಬಾಯಿಗೆ ಬಂದಂತೆ ಮಾತನಾಡಿ ಆ ಬಳಿಕ ಕ್ಷಮೆ ಕೇಳುತ್ತಾರೆ. ಈ ರೀತಿಯ ಎಡಬಿಡಂಗಿತನದ ವ್ಯಕ್ತಿದವರು ನನಗೆ ಇಷ್ಟ ಆಗಲ್ಲ. ನನಗೆ ಅಥವಾ ನನ್ನ ಕುಟುಂಬಕ್ಕೆ ಅಂತಹ ವ್ಯಕ್ತಿಗಳ ಜೊತೆ ಇರಲು ಆಸಕ್ತಿ ಇಲ್ಲ ನಾನು ಬಹಳ ಸರಳ ಮನುಷ್ಯ ಎಂದು ಹೇಳಿದ್ದಾರೆ. ನಾನ ಅಂದ್ರೆ ಸುಮ್ಮನೇನಾ ? 

ವೆಬ್ದುನಿಯಾವನ್ನು ಓದಿ