ಕಷ್ಟದ ಸಮಯದಲ್ಲಿದ್ದ ಸ್ನೇಹಿತರ ಬಗ್ಗೆ ಪವಿತ್ರಾ ಗೌಡ ಮನದಾಳದ ಮಾತು

Sampriya

ಸೋಮವಾರ, 10 ಫೆಬ್ರವರಿ 2025 (16:42 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ, ಜಾಮೀನು ಮೂಲಕ ಹೊರಬಂದಿರುವ ಪವಿತ್ರಾ ಗೌಡ ಸದ್ಯ ಟೆಂಪಲ್ ರನ್ ಮಾಡುತ್ತಿದ್ದಾರೆ. ಈಚೆಗೆ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪಾಲ್ಗೊಂಡು, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದರು.

ಇದೀಗ ತಮ್ಮ ಬಿಸಿನೆಸ್ ಕಡೆ ಗಮನಹರಿಸಿರುವ ಪವಿತ್ರಾ ಗೌಡ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಸ್ಟೋರಿಯೊಂದು ವೈರಲ್ ಆಗಿದೆ.  ಸ್ನೇಹ ಮತ್ತು ಸ್ನೇಹಿತರ ಬಗೆಗಿನ ಒಂದು ಸಂದೇಶವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಆಪ್ತರ ಬಗ್ಗೆ ಪವಿತ್ರಾ ಗೌಡ ಮನದಾಳದ ಮಾತುಗಳನ್ನಾಡಿದ್ದಾರೆ.

ಬಹುಭಾಷಾ ನಟಿ ರಾಶಿ ಖಾನ್ನಾ ಅವರು ಸಂದರ್ಶನವೊಂದರಲ್ಲಿ ಸ್ನೇಹಿತರ ಬಗೆಗೆ ಆಡಿದ ಮಾತುಗಳ ವಿಡಿಯೋ ಸಂದೇಶವನ್ನು ಅವರು ಶೇರ್ ಮಾಡಿದ್ದಾರೆ.  ಒಳ್ಳೆಯ ಸ್ನೇಹಿತರ ಸಂಗ ಎಷ್ಟೋ ಮುಖ್ಯ ಎಂದು ನಾನು ಅರಿತೆ. ಅದು ಬಹಳ ಮುಖ್ಯ. ಇದು ಯಾರು ಎಂಬುದನ್ನು ನಿರ್ಧರಿಸುತ್ತೆ. ನನಗೆ ಒಂದಷ್ಟು ಅದ್ಭುತ ಸ್ನೇಹಿತರು ಇದ್ದಾರೆ, ಒಳ್ಳೆಯ ಕೆಲಸಗಳನ್ನು ಮಾಡಲು ಸದಾ ಹುರಿದುಂಬಿಸುತ್ತಾರೆ. ನನಗೆ ಭೇಟಿಯಾಗಲು ಸಮಯ ಸಿಗಲಿಲ್ಲ, ಅದು ಇದು ಎನ್ನುವವರು ಬೇಕಾಗಿಲ್ಲ. ಭೇಟಿಯಾಗದಿದ್ದರು ಪರವಾಗಿಲ್ಲ ಏನ್ ಮಾಡ್ತಾ ಇದ್ದೀಯಾ, ನಿನ್ನ ಬಗ್ಗೆ ನನಗೆ ಖುಷಿಯಿದೆ. ನಿನ್ನ ಜತೆ ನಿಲ್ಲುತ್ತೇವೆ ಎನ್ನುವ ಸ್ನೇಹಿತರು ಬೇಕಾಗಿದ್ದಾರೆ ಎಂದು ರಾಶಿ ಖನ್ನಾ ವಿವರಿಸಿದ್ದರು.

ಇದೇ ವಿಡಿಯೋ ಸಂದೇಶವನ್ನು ಪವಿತ್ರಾ ಗೌಡ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಕಷ್ಟದ ಸಮಯದಲ್ಲಿದ್ದ ಸ್ನೇಹಿತರ ಬಗ್ಗೆ ಪವಿತ್ರಾ ನೆನಪಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ