ಅಭಿಮಾನಿಗಳಿಗೆ ಕೊನೆಗೂ ಗುಡ್‌ನ್ಯೂಸ್ ಕೊಟ್ಟ ದರ್ಶನ್‌, ಫ್ಯಾನ್ಸ್‌ ಫುಲ್ ಹ್ಯಾಪಿ

Sampriya

ಭಾನುವಾರ, 9 ಫೆಬ್ರವರಿ 2025 (17:05 IST)
Photo Courtesy X
ಬೆಂಗಳೂರು: ಈ ಬಾರಿ ಬರ್ತಡೇ ಆಚರಿಸಲ್ಲ ಎಂದು ತಮ್ಮ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ್ದ ನಟ ದರ್ಶನ್ ತಮ್ಮ ಸಿನಿಮಾ ಸಂಬಂಧ ಇದೀಗ ಸಿಹಿ ಸುದ್ದಿ ನೀಡಿದ್ದಾರೆ.

ಅವರ ಬಹುನಿರೀಕ್ಷಿತ  'ಡೆವಿಲ್' ಸಿನಿಮಾದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. 'ಡೆವಿಲ್' ಚಿತ್ರದ ಟೀಸರ್ ರಿಲೀಸ್ ಆಗಲಿದೆ ಎಂದು ಸ್ವತಃ ದರ್ಶನ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

ಇದೇ 16ರಂದು ದರ್ಶನ್ ಅವರು 48ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಆದರೆ ತಮ್ಮ ಬೆನ್ನು ನೋವಿನ ಕಾರಣದಿಂದಾಗಿ ಈ ಬಾರಿ ಸೆಲೆಬ್ರಿಟಿಗಳನ್ನು ಭೇಟಿಯಾಗಲು ಆಗುತ್ತಿಲ್ಲ ಎಂದು ಅಭಿಮಾನಿಗಳಲ್ಲಿ ಕ್ಷಮೆ ಕೇಳಿ ವಿಡಿಯೋ ಬಿಡುಗಡೆ ಮಾಡಿದ್ದರು.

ಇದೀಗ ಡೆವಿಲ್ ಚಿತ್ರದ ಟೀಸರ್ ಆಗಲಿದೆ ಎಂಬುದು ಡಿಬಾಸ್ ಅಭಿಮಾನಿಗಳಲ್ಲಿ ಖುಷಿ ತಂದು ಕೊಟ್ಟಿದೆ. ನಮ್ಮ ಹೊಸ ಪ್ರಯತ್ನದ ಹಾರಿವು ಶೀಘ್ರದಲ್ಲೇ ನಿಮ್ಮ ಮುಂದೆ ಎಂದು 'ಡೆವಿಲ್' ಪೋಸ್ಟರ್ ಶೇರ್ ಮಾಡಿ ದರ್ಶನ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನು ವಿಜಯಲಕ್ಷ್ಮಿ ಕೂಡಾ ಸ್ಟೋರಿ ಹಾಕಿಕೊಂಡಿದ್ದಾರೆ.

ಇನ್ನೂ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಆಗುವ ಮುನ್ನ 'ಡೆವಿಲ್' ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಆ ವೇಳೆ, ಚಿತ್ರದ ಮೊದಲ ಗ್ಲಿಂಪ್ಸ್ ಬಿಡುಗಡೆ ಆಗಿತ್ತು. ಬೇಲ್ ಮೇಲೆ ಹೊರಬಂದ ಬಳಿಕ ಸಿನಿಮಾದ ಡಬ್ಬಿಂಗ್ ಕೆಲಸದಲ್ಲಿ ದರ್ಶನ್ ಭಾಗಿಯಾಗಿದ್ದರು. ಒಟ್ಟಿನಲ್ಲಿ ನಾನಾ ಕಾರಣಗಳಿಂದ ಡೆವಿಲ್ ಸಿನಿಮಾದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ