ರಾತ್ರೋ ರಾತ್ರಿ ಪವನ್ ಕಲ್ಯಾಣ್ ಬಂಧನ

ಭಾನುವಾರ, 10 ಸೆಪ್ಟಂಬರ್ 2023 (09:30 IST)
ಹೈದರಾಬಾದ್: ಆಂಧ್ರ ರಾಜಕೀಯದಲ್ಲಿ ಹೈಡ್ರಾಮಾ ನಡೆಯುತ್ತಿದ್ದು, ರಾತ್ರೋ ರಾತ್ರಿ ನಟ, ರಾಜಕಾರಣಿ ಪವನ್ ಕಲ್ಯಾಣ್ ರನ್ನು ಬಂಧಿಸಲಾಗಿದೆ.

ಸೈಕಲ್ ಹಗರಣದಲ್ಲಿ ನೂರಾರು ಕೋಟಿ ರೂ. ಹಗರಣ ನಡೆದಿದೆ ಎಂದು ಟಿಡಿಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿತ್ತು.  ಚಂದ್ರಬಾಬು ನಾಯ್ಡು ಭೇಟಿಗೆ ಪವನ್ ಕಲ್ಯಾಣ್ ಬಂದಿದ್ದರು. ಈ ವೇಳೆ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ರನ್ನು ಪೊಲೀಸರು ತಡೆದರು.

ಪೊಲೀಸರ ವರ್ತನೆ ಪ್ರತಿಭಟಿಸಿ ಪವನ್ ರಸ್ತೆಯಲ್ಲೇ ಮಲಗಿದ್ದರು. ಪೊಲೀಸರು ಸ್ಥಳದಿಂದ ತೆರಳುವಂತೆ ಸೂಚಿಸಿದರೂ ಒಪ್ಪದೇ ಇದ್ದಾಗ ಅವರನ್ನು ಬಂಧಿಸಲಾಯಿತು. ಕೆಲ ಹೊತ್ತಿನ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ