ವಿಜಯ್ ಜೊತೆ ರಶ್ಮಿಕಾ ಲಿವ್ ಇನ್ ರಿಲೇಷನ್ ಶಿಪ್? ಸಾಕ್ಷಿ ಹುಡುಕಿದ ನೆಟ್ಟಿಗರು

ಶುಕ್ರವಾರ, 8 ಸೆಪ್ಟಂಬರ್ 2023 (08:10 IST)
Photo Courtesy: Twitter
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಗಾಸಿಪ್ ಇತ್ತು. ಇದೀಗ ಇಬ್ಬರೂ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂದು ನೆಟ್ಟಿಗರು ಸಾಕ್ಷಿ ಸಮೇತ ವಾದಿಸಿದ್ದಾರೆ.

ಇತ್ತೀಚೆಗೆ ರಶ್ಮಿಕಾ ತಮ್ಮ ಆಪ್ತ ಸಾಯಿ ಎಂಬವರ ಮದುವೆಗೆ ಗೋಲ್ಡನ್ ಕಲರ್ ಸೀರೆಯುಟ್ಟು ರೆಡಿಯಾಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ವಿಶೇಷವೆಂದರೆ ಇದೇ ಸ್ಥಳದಲ್ಲಿ ಕೆಲವು ದಿನಗಳ ಮೊದಲು ವಿಜಯ್ ದೇವರಕೊಂಡ ತಮ್ಮ ಮನೆಯ ಲಾನ್ ನಲ್ಲಿ ಕುಳಿತಿರುವುದಾಗಿ ಫೋಟೋ ಪ್ರಕಟಿಸಿದ್ದರು.

ಹೀಗಾಗಿ ಇವೆರಡೂ ಫೋಟೋಗಳ ನಡುವಿನ ಸಾಮ್ಯತೆ ನೆಟ್ಟಿಗರ ಗಮನ ಸೆಳೆದಿದೆ. ಇದೇ ಕಾರಣಕ್ಕೆ ರಶ್ಮಿಕಾ-ವಿಜಯ್ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ ನೆಟ್ಟಿಗರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ