ಅನುಪಮಾ ಪರಮೇಶ್ವರ್ ಮೇಲೆ ಸಿಟ್ಟಾದ ಪವನ್ ಕಲ್ಯಾಣ್ ಅಭಿಮಾನಿಗಳು
ಮಂಗಳವಾರ, 4 ಮೇ 2021 (08:39 IST)
ಹೈದರಾಬಾದ್ : ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಶ್ರುತಿ ಹಾಸನ್ ಅಭಿನಯದ ವಕೀಲ್ ಸಾಬ್ ಚಿತ್ರ ಈಗಾಗಲೇ ಪ್ರೇಮಿಗಳ ಮನಗೆದ್ದಿದೆ. ಇತ್ತೀಚೆಗೆ ವಕೀಲ್ ಸಾಬ್ ಚಿತ್ರ ವೀಕ್ಷಿಸಿ ವಿಮರ್ಶೆ ಹಂಚಿಕೊಳ್ಳಲು ಹೋಗಿ ಇದೀಗ ಅನುಪಮಾ ಪರಮೇಶ್ವರ್ ಅವರು ಪವನ್ ಕಲ್ಯಾಣ್ ಅವರ ಅಭಿಮಾನಿಗಳ ಕೆಂಗಣ‍್ಣಿಗೆ ಗುರಿಯಾಗಿದ್ದಾರೆ.
ವಕೀಲ್ ಸಾಬ್ ಚಿತ್ರ ನೋಡಿದ ನಟಿ ಅನುಪಮಾ ಪರಮೇಶ್ವರ್ ಅವರು ಟ್ವೀಟರ್ ನಲ್ಲಿ ಈ ಚಿತ್ರದಲ್ಲಿ ಪ್ರಬಲವಾದ ಸಂದೇಶವನ್ನು ನೀಡಲಾಗಿದೆ. ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಅಡೆತಡೆಗಳನ್ನು ಮುರಿದು ಮೂವರು ಪ್ರಮುಖ ಮಹಿಳೆಯರೊಂದಿಗೆ ಕಥೆಯನ್ನು ಎದ್ದು ಕಾಣುವಂತೆ ಮಾಡುತ್ತಾರೆ. ಪ್ರಕಾಶ್ ರಾಜ್ ಸರ್ ನೀವು ಇಲ್ಲದೇ ಚಿತ್ರ ಅಪೂರ್ಣವಾಗಿದೆ ಎಂದು ತಿಳಿಸಿದ್ದಾರೆ.
ಪವನ್ ಕಲ್ಯಾಣ್ ಅವರನ್ನು ಹೆಸರಿನಿಂದ ಸಂಬೋಧಿಸಿದ ನಟಿ ಪ್ರಕಾಶ್ ರಾಜ್ ಗೆ ಸರ್ ಎಂದು ಕರೆದ ಹಿನ್ನಲೆಯಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಇದಕ್ಕೆ ನಟಿ ಕ್ಷಮೆ ಕೇಳಿದ್ದಾರೆ.