ಫೋನೇ ದೊಡ್ಡ ತಲೆನೋವಾಗಿದೆಯಂತೆ ದೀಪಿಕಾ ಪಡುಕೋಣೆಗೆ

ಶನಿವಾರ, 1 ಆಗಸ್ಟ್ 2015 (10:31 IST)
ನಟಿ ದೀಪಿಕಾ ಪಡುಕೋಣೆ ಕೊಂಚ ಬಿಡುವಾಗಿರೋದರಿಂದ ತಮ್ಮ ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡುತ್ತಿದ್ದಾರಂತೆ. ಆದ್ರೆ ಡಿಪ್ಪಿಗೆ ಫ್ಯಾಮಿಲಿ ಜೊತೆ ಇರೋವಾಗ ಅವರ ಮೊಬೈಲ್ ಫೋನ್ ತುಂಬಾನೇ ಕಾಟ ಕೊಡುತ್ತಿದೆಯಂತೆ. ಹಾಗಾಗಿ ಡಿಪ್ಪಿಗೆ ಕೊಂಚ ಡಿಸ್ಟ್ರಬ್ ಆಗ್ತಿದೆಯಂತೆ.
ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ ನಟನೆಯ ಭಾಜಿರಾವ್ ಮಸ್ತಾನಿ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದ ದೀಪಿಕಾ ಪಡುಕೋಣೆ ಸ್ನೇಹಿತರು, ಹಿತೈಷಿಗಳು ಜೊತೆಗೆ ಕೆಲ ಅಭಿಮಾನಿಗಳು ಟೀಸರ್ ಬಗ್ಗೆ ಕಾಲ್ , ಮೆಸೇಜ್ ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರಂತೆ. ಹಾಗಾಗಿ ಒಂದೇ ಸಮನೆ ಫೋನ್ ಕಾಲ್ಸ್, ಮೆಸೇಜ್ ಗಳು ಬರುತ್ತಿವೆಯಂತೆ. ಹಾಗಾಗಿ ದೀಪಿಕಾಗೇ ಅದಕ್ಕೆ ಉತ್ತರಿಸೋಕೆ ಸಮಯಾನೇ ಸಿಗುತ್ತಿಲ್ಲವಂತೆ.
 
ಒಟ್ಟಿನಲ್ಲಿ ಫ್ಯಾಮಿಲಿ ಜೊತೆ ಕೊಂಚ ಸಮಯ ಕಳೆಯೋನಾ ಅಂದ್ರೆ ದೀಪಿಕಾಗೆ ಫೋನ್ ಬಿಡುತ್ತಿಲ್ಲವಂತೆ. ಅತ್ತ ಫೋನ್ ಸ್ವಿಚ್ ಆಫ್ ಮಾಡಿ ಸುಮ್ಮನೆ ಇರೋಕೋ ಸಾಧ್ಯವಾಗುತ್ತಿಲ್ಲ. ಹಾಗಾಗಿ ದೀಪಿಕಾ ಫೋನ್ ಬಗ್ಗೆ ಫುಲ್ ಗರಂ ಆಗಿದ್ದಾರಂತೆ.

ವೆಬ್ದುನಿಯಾವನ್ನು ಓದಿ