ಜುಲೈನಲ್ಲಿ ಚೀನಾ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿರುವ 'ಪಿಕೆ'

ಗುರುವಾರ, 30 ಏಪ್ರಿಲ್ 2015 (10:36 IST)
ಭಾರತೀಯ ಚಿತ್ರರಂಗದ ವಿಭಿನ್ನ ನಟ ಆಮೀರ್ ಖಾನ್ ಅವರ ಅಭಿನಯದ ಚಿತ್ರ ಪಿಕೆ. ಆದರು ಬಾಕ್ಸಾಫೀಸಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈಗ ಬಂದಿರುವ ಸುದ್ದಿ ಏನೆಂದರೆ ಈ ಚಿತ್ರವೂ ಚೈನಾ ದೇಶದಲ್ಲಿ ಪ್ರದರ್ಶನವಾಗಳು ಸಿದ್ಧವಾಗುತ್ತಿದೆಯಂತೆ. ಈ ಸಂಗತಿಯನ್ನು ಆ ಚಿತ್ರದ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರು ತಿಳಿಸಿದ್ದಾರೆ. ತಮ್ಮ ನಿರ್ದೇಶನದ 3 ಈಡಿಯೇಟ್ಸ್ ಚಿತ್ರಕ್ಕೆ ಉತ್ತಮ ಸ್ಪಂದನೆ ಅಲ್ಲಿನ ಪ್ರೇಕ್ಷಕರಿಂದ ದೊರೆತಿದ್ದು, ಈಗ ಪಿಕೆಗೋ ಸಹಿತ ಅಂತಹದ್ದೇ ಸ್ಪಂದನೆ ದೊರಕುತ್ತದೆ ಎಂದು ನಂಬಿರುವುದಾಗಿ ತಿಳಿಸಿದ್ದಾರೆ  ಹಿರಾನಿ 
ಪಿಕೆ ಚಿತ್ರದ ಬಿಡುಗಡೆ ಆಗುತ್ತಿದೆ. ಅದರ ಪ್ರಚಾರಕ್ಕೆಂದು ನಾವೆಲ್ಲರೂ ಚೈನಾ ದೇಶಕ್ಕೆ ಹೋಗುತ್ತಿದ್ದೇವೆ. ಈ ಚಿತ್ರ ಚೈನಾ ದೇಶದಲ್ಲಿ 3500 ರಿಂದ 4000 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ ಎನ್ನುವ ಸಂಗತಿಯನ್ನು ಹಿರಾನಿ ಹೇಳಿದ್ದಾರೆ. 
 
ಪಿಕೆ ಚಿತ್ರ ಈಗಾಗಲೇ ಪಾಕಿಸ್ತಾನ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಮಲೇಶಿಯಾ, ದಕ್ಷಿಣ ಆಫ್ರಿಕಾ ಶ್ರೀಲಂಕಾ ದೇಶಗಳಲ್ಲಿ ಬಿಡುಗಡೆ ಆಗಿದ್ದು, ಚೈನಾದಲ್ಲಿ ಜುಲೈ ನಲ್ಲಿ ಬಿಡುಗಡೆ ಆಗಲಿದೆ. ಅನುಷ್ಕಾ ಶರ್ಮ, ಸುಶಾಂತ್ ಸಿಂಗ್ ರಾಜ್ ಪೂತ್, ಸಂಜಯ್ ದತ್ ಇದರಲ್ಲಿ ಮುಖ್ಯ ಪಾತ್ರಧಾರಿಗಳಾಗಿದ್ದಾರೆ.  

ವೆಬ್ದುನಿಯಾವನ್ನು ಓದಿ