ಪೀಕೆ ಅತ್ಯಂತ ಸಮರ್ಥವಾಗಿ ವಿವಾದಕ್ಕೆ ಎಡೆ ಮಾಡದೆ ನಿರ್ಮಿಸಲಾಗಿದೆ- ಅನುರಾಗ್ ಕಶ್ಯಪ್

ಶನಿವಾರ, 27 ಡಿಸೆಂಬರ್ 2014 (10:33 IST)
ಧರ್ಮದ ವಿಷಯಕ್ಕೆ ಬಂದರೆ ಎಲ್ಲರಿಗೂ ಸಿಟ್ಟು ಬರುತ್ತದೆ. ಅದರಲ್ಲೂ ಸಿನಿಮಾದಲ್ಲಿ ತೋರಿಸಿ ಬಿಟ್ಟರೆ ಅದರ ಬಗ್ಗೆ ಹೆಚ್ಚು ಸಿಟ್ಟು ಉಂಟಾಗಿ ಅದನ್ನು ಚಿತ್ರತಂಡವರ ಮೇಲೆ ತೋರುವ ಸಾಧ್ಯತೆ ಹೆಚ್ಚು. ಆಮೀರ್ ಖಾನ್ ಅಭಿನಯದ ಪೀಕೆ ಚಿತ್ರದಲ್ಲಿ ಧರ್ಮದ ಬಗ್ಗೆ ಭಿನ್ನವಾಗಿ ತೋರಿದ್ದಾರೆ ಎನ್ನುವ ಮಾತನ್ನು ಪ್ರಸಿದ್ಧ ನಿರ್ದೇಶಕ ಅನುರಾಗ್ ಕಶ್ಯಪ್ ತಿಳಿಸಿದ್ದಾರೆ.  ಧರ್ಮ ಸಂಬಂಧಿತ ಅಂಶಗಳನ್ನು ತುಂಬಾ ಸರಳ ಹಾಗೂ ನವಿರಾಗಿ ತಿಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಅನುರಾಗ್ ಕಶ್ಯಪ್. 
ಆಶ್ಚರ್ಯಕರ ಸಂಗತಿ ಏನೆಂದರೆ ಈ ಸಿನಿಮಾವನ್ನು ತುಂಬಾ ಬುದ್ಧಿವಂತಿಕೆಯಿಂದ ನಿರ್ಮಿಸಲಾಗಿದೆ. ವಿವಾದಗಳು ಬರದಂತೆ, ಧರ್ಮ, ದೇವರು, ಮಠಾಧಿಪತಿಗಳ ಬಗ್ಗೆ ಸಿನಿಮಾ ನಿರ್ಮಿಸುವುದು ಸಾಮಾನ್ಯ ಸಂಗತಿ ಅಲ್ಲ. ರಾಜ್ ಕುಮಾರ್ ಹಿರಾನಿ ಆ ಕೆಲಸವನ್ನು ಅಚ್ಚುಕಟ್ಟಾಗಿ ಎಲ್ಲಿಯೂ ಲೋಪ ಬರದಂತೆ ಸಾಹಸದಿಂದ ನಿರ್ದೇಶಿಸಿದ್ದಾರೆ. ತಾವು ಇಂತಹ ಚಿತ್ರದ ನಿರ್ಮಾಣಕ್ಕೆ ಮುಂದಡಿ ಇದಲ್ಲ, ಆದರೆ ನಿರ್ದೇಶಕ ಹಿರಾನಿ, ನಿರ್ಮಾಪಕ ವಿಧು ವಿನೋದ್ ಚೋಪ್ರ ಮತ್ತು ಆಮೀರ್ ಖಾನ್ ಧೈರ್ಯವಾಗಿ ಈ ಪ್ರಾಜಕ್ಟ್ ನಲ್ಲಿ ಪಾಲ್ಗೊಂಡಿದ್ದಾರೆ ಎಂದು ಪ್ರಶಂಸಿಸಿದ್ದಾರೆ ಅನುರಾಗ್.  

ವೆಬ್ದುನಿಯಾವನ್ನು ಓದಿ