ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ... ಪ್ಲೀಸ್ ಇನ್ನು ನಾನು ಅದನ್ನು ಮಾಡಲ್ಲ!!

ಗುರುವಾರ, 2 ಅಕ್ಟೋಬರ್ 2014 (09:22 IST)
ಇನ್ನು ದಯಮಾಡಿ ನನ್ನನ್ನು ಬಲವಂತ ಮಾಡ ಬೇಡಿ ನಾನು ಮಾಡಲ್ಲ.. ಪ್ಲೀಸ್ ನನ್ನನ್ನು ಬಿಟ್ಟು  ಬಿಡಿ ಪ್ಲೀಸ್ ಪ್ಲೀಸ್ ಅನ್ನುವ ಪರಿಸ್ಥಿತಿ ಎದುರಾಗಿದೆ ಪ್ರಿಯಾಂಕ ಚೋಪ್ರಾಗೆ.. ಅದಕ್ಕೆ ಕಾರಣ ಇಷ್ಟೇ. ಆಕೆ ಮೆರಿಕೊಂ ಎನ್ನುವ ಚಿತ್ರದಲ್ಲಿ ನಟಿಸಿ ಗೆದ್ದಿದ್ದಾರೆ. ಆ ಚಿತ್ರವು ನಿರೀಕ್ಷೆ ಮಾಡಿರುವುದಕ್ಕಿಂತ ಹೆಚ್ಚಿನ ಯಶಸ್ಸು ಪಡೆದಿದೆ.

ಅದನ್ನು ಮುಂದಿಟ್ಟುಕೊಂಡು ಅಂದರೆ ಕ್ರೀಡಾಪಟುಗಳ ಜೀವನ ಕಥೆಯನ್ನು ಮುಂದೆ ಇಟ್ಟು ತಾವು ಗೆಲ್ಲುವ ಹುನ್ನಾರ ನಡೆಸಿದ್ದಾರೆ ಅನೇಕ ನಿರ್ಮಾಪಕ ನಿರ್ದೇಶಕರು. ಅದಕ್ಕಾಗಿ ಅವರು ಕೆಲವರು ಕಥೆ ಸಿದ್ಧ ಮಾಡಿಕೊಂಡೆ ಬಂದಿದ್ದರಂತೆ. ಇದರಿಂದ ಕಿರಿಕಿರಿ ಎದುರಿಸಿದ ಈ ಚೆಲುವೆ ಇನ್ನು ನಾನು ಕ್ರೀಡಾಪಟುವಿನ ಪಾತ್ರ ಮಾಡುವುದಿಲ್ಲ.
 
ಒಂದು  ಸಿನಿಮಾ ಕ್ಲಿಕ್  ಆದರೆ ಅದೇ ರೀತಿಯ ಸಿನಿಮಾಗಳಲ್ಲಿ ನಟಿಸಲು ನನ್ನ ಕೈಲಿ ಆಗಲ್ಲ. ಒಬ್ಬ ನಟಿಯಾಗಿ ಭಿನ್ನತೆಗೆ ಆದ್ಯತೆ ನೀಡುತ್ತೇನೆ ವಿನಃ ಮಾಡಿದ್ದನ್ನೇ ಮಾಡೋಕೆ ನನ್ನ ಕೈಲಿ ಅಸಾಧ್ಯ. ಭಿನ್ನ ಪಾತ್ರಗಳಲಿ ನನ್ನನ್ನು ತೊಡಗಿಸಿಕೊಳ್ಳ ಬೇಕು ಎನ್ನುವ ಸಂಕಲ್ಪ ನನ್ನದು ಭವಿಷ್ಯದಲ್ಲಿ ತಾರ ಬದುಕಿನ ಬಗ್ಗೆ ಅವಲೋಕಿಸಿದರೆ ಕನಿಷ್ಠ ಹತ್ತು ಇಪ್ಪತ್ತಾದರು  ಸಿನಿಮಾಗಳು ಇರಬೇಕು ನೆನಪು ಉಳಿಯುವಂತದ್ದು ಎಂದು ಹೇಳಿದ್ದಾಳೆ ಈ ಚೆಲುವೆ.ಆದ್ದರಿಂದ ನಾವು ಮೇಲೆ ಹೇಳಿದ ಪರಿಸ್ಥಿತಿ ಆಕೆಗೆ ಉಂಟಾಗಿದೆ ಎಂದು ಹೇಳಿದ್ದು!!

ವೆಬ್ದುನಿಯಾವನ್ನು ಓದಿ