ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬೇಧಿಸಲು ಪೊಲೀಸರ ಮಾಸ್ಟರ್ ಪ್ಲ್ಯಾನ್

Sampriya

ಗುರುವಾರ, 4 ಜುಲೈ 2024 (16:19 IST)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ  ನಟ ದರ್ಶನ್ ಹಾಗೂ ಗ್ಯಾಂಗ್‌ಗೆ ಜುಲೈ 18ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಇದೀಗ ಪ್ರಕರಣ ಸಂಬಂಧ ಪೊಲೀಸರು ಮತ್ತಷ್ಟು ತನಿಖೆಯ ಅಳಕ್ಕೆ ಇಳಿದಿದ್ದು, ಕೋರ್ಟ್‌ ಮುಂದೆ ಪೊಲೀಸರು 16 ಪುಟಗಳ ರಿಮೈಂಡ್ ಕಾಪಿಯನ್ನು ಸಲ್ಲಿಸಿದ್ದಾರೆ.

ಇನ್ನೂ ಪೊಲೀಸರು ಸಲ್ಲಿಸಿದ ರಿಮೈಂಡ್‌ ಕಾಪಿಯಲ್ಲಿ ಆರೋಪಿಗಳು ಕೃತ್ಯ ನಡೆಸುವುದಕ್ಕೂ ಮುನ್ನಾ ಏನೆಲ್ಲಾ ಪ್ಲ್ಯಾನ್ ಮಾಡಿಕೊಂಡಿದ್ದರು ಮತ್ತು ಸಾಕ್ಷ್ಯ ನಾಶಕ್ಕಾಗಿ ಬೇರೆಯವರ ಹೆಸರಿನಲ್ಲಿ ಸಿಮ್ ಖರೀದಿ ಮಾಡಿರುವುದರ ಬಗ್ಗೆ ಉಲ್ಲೇಖ ಮಾಡಿದ್ದಾರೆ.

ಇನ್ನೂ ಈ ಪ್ರಕರಣವನ್ನು ಮುಚ್ಚಿಹಾಕಲು ಡಿಗ್ಯಾಂಗ್‌ ಬರೋಬ್ಬರಿ 84 ಲಕ್ಷ ಹಣವನ್ನು ಬಳಸಿರುವುದಾಗಿ ಗೊತ್ತಾಗಿದೆ. ರೇಣುಕಾಸ್ವಾಮಿ ಹತ್ಯೆ ಕೃತ್ಯ ನಡೆಸಲು ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ದರ್ಶನ್  ಸೇರಿದಂತೆ 6 ಮಂದಿ ಆರೋಪಿಗಳು ಬೇರೆಯವರ ಹೆಸರಿನಲ್ಲಿ ಸಿಮ್ ಖರೀದಿ ಮಾಡಿರುವುದು ತಿಳಿದುಬಂದಿದೆ.

ಹೇಮಂತ್ ಎಂಬ ವ್ಯಕ್ತಿಯ  ಹೆಸರಿನಲ್ಲಿ ಸಿಮ್ ಖರೀದಿಸಿ ದರ್ಶನ್ ಅವರು ಬಳಸುತ್ತಿದ್ದರು. ಇನ್ನೂ ಪವಿತ್ರಾ ಗೌಡ ಅವರು ಬಸವೇಶ್ವರ್ ನಗರದ ಮನೋಜ್ ಹೆಸರಿನಲ್ಲಿ ಸಿಮ್ ಖರೀದಿಸಿ ಮೊಬೈಲ್ ಬಳಸಿರುವುದು ತಿಳಿದುಬಂದಿದೆ.

ಇನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರು ಮೊಬೈಲ್‌ಗಳನ್ನು ಹೈದರಾಬಾದ್‌ನ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದು, ಅದರಲ್ಲಿ ಆರೋಪಿಗಳು ಕೃತ್ಯ ನಡೆಸಿದ ಪ್ಲ್ಯಾನ್ ಬಗ್ಗೆ ತಿಳಿಯಲಿದೆ. ಈ ಮೂಲಕ ದರ್ಶನ್ ಈ ಪ್ರಕರಣ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ