ಥಿಯೇಟರ್‌ನಲ್ಲಿ ಸವಿಯಲು ರೆಡಿಯಾಗಿದೆ ’ಜಿಲೇಬಿ’

ಬುಧವಾರ, 1 ಮಾರ್ಚ್ 2017 (11:35 IST)
ಪೂಜಾಗಾಂಧಿ ಅಭಿನಯದ ಜಿಲೇಬಿ ಚಿತ್ರಮಂದಿರಕ್ಕೆ ಬರಲು ಸಿದ್ಧರಾಗಿ. ಲಕ್ಕಿ ಶಂಕರ್ ಅವರ ಹಿಂದಿನ ಎರಡು ಸಿನಿಮಗಳು `90 ಹಾಗೂ ದೇವರಾಣೆ ಮನರಂಜನೆ ಜತೆಗೆ ಸಮಾಜಮುಖಿಯಾಗಿಯೂ ನೀಡಿದ್ದರು. ಈ `ಜಿಲೇಬಿ’ ಸಿನಿಮಾದಲ್ಲೂ ಸಹ ಮನರಂಜನೆಯ ಜೊತೆಗೆ ಮನಸ್ಸಿಗೆ ನಾಟುವ ವಿಷಯವನ್ನು ಅಡಕ ಮಾಡಿದ್ದಾರೆ.
 
`ಜಿಲೇಬಿ’... ಹಾಟ್ ಅಂಡ್ ಸ್ವೀಟ್ ಪೂಜಾ ಗಾಂಧಿ ಮತ್ತು ಯಶಸ್ ಸೂರ್ಯ,ನಾಗೇಂದ್ರ ಹಾಗೂ ವಿಜಯ್ ಚೆಂಡುರ್ ಸೇರಿದಂತೆ ಮೂವರು ಯುವಕರ ಸುತ್ತ ಜರುಗುವ ಕಥೆ. ಸುಧಾಕರ್ ಅವರ ಹಾಸ್ಯ ಸಹ ಈ ಚಿತ್ರಕ್ಕೆ ಸೇರಿಕೊಂಡಿದೆ.
 
ಲಕ್ಕಿ ಶಂಕರ್ ಅವರ ಜೊತೆ ಶಿವ ಕಬ್ಬಿನ್ ಅವರು ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಎಂ ಆರ್ ಸೀನು ಛಾಯಾಗ್ರಾಹಣ, ಜೇಮ್ಸ್ ಆರ್ಕಿಟೆಕ್ಟ್ ಸಂಗೀತ ಚಿತ್ರಕ್ಕಿದೆ. ಮಾಲೂರ್ ಶ್ರೀನಿವಾಸ್ ನೃತ್ಯ, ರವಿ ಅವರ ಸಂಕಲನ ಜಿಲೇಬಿಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ