ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿಗೆ ಮದುವೆಯಂತೆ...!

ಸೋಮವಾರ, 4 ಡಿಸೆಂಬರ್ 2017 (14:07 IST)
ಮುಂಗಾರು ಮಳೆ ಚಿತ್ರದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಪೂಜಾ ಗಾಂಧಿ ಸಪ್ತಪದಿ ತುಳಿಯಲಿದ್ದಾರಂತೆ. ಆದಷ್ಟು ಶೀಘ್ರದಲ್ಲಿಯೇ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರಂತೆ. 
ನಾನು ತುಂಬಾ ಸಂತೋಷದಿಂದ ನೆಮ್ಮದಿಯಿಂದಿದ್ದೇನೆ. ಶೀಘ್ರದಲ್ಲಿಯೇ ವೈವಾಹಿಕ ಜೀವಕ್ಕೆ ಕಾಲಿಟ್ಟು ಸಂತಸದ ಸುದ್ದಿಯನ್ನು ಕೊಡುತ್ತೇನೆ ಎಂದು ತಿಳಿಸಿದ್ದಾರೆ.
 
ಪೋಷಕರು ಈಗಾಗಲೇ ವರನ ಹುಡುಕಾಟದಲ್ಲಿದ್ದು ಶಾರ್ಟ್‌ಲಿಸ್ಟ್ ಮಾಡುತ್ತಿದ್ದಾರೆ. ಕರ್ನಾಟಕದ ಹುಡುಗನನ್ನೇ ವಿವಾಹವಾಗುವುದು ನನ್ನ ಬಯಕೆಯಾಗಿದೆ ಎಂದು ಹೇಳಿದ್ದಾರೆ.
 
ಕೆಲವು ಬಾರಿ ನಾನು ರಾಜಕಾರಣಕ್ಕೆ ಸೂಕ್ತವಲ್ಲವೇನೋ ಎನ್ನುವ ಭಾವನೆ ಬರುತ್ತಿದೆ. ಸದ್ಯಕ್ಕಂತೂ ರಾಜಕಾರಣಕ್ಕೆ ಬರುವ ಯೋಚನೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಈ ಹಿಂದೆ ಪೂಜಾಗಾಂಧಿ ನಿಶ್ಚಿತಾರ್ಥ ಬಿಜಿನೆಸ್ ಮ್ಯಾನ್, ರಿಯಲ್ ಎಸ್ಟೇಟ್ ಉದ್ಯಮಿ ಆನಂದ್ ಗೌಡ ಎಂಬುವರ ಜತೆ ನಡೆದಿತ್ತು. ಕೆಲ ಕಾರಣಗಳಿಂದ ಮದುವೆ ಮುರಿದು ಬಿದ್ದಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ