ಬಾಕ್ಸ್‌ಆಫೀಸಿನಲ್ಲಿ ನೂತನ ದಾಖಲೆ ನಿರ್ಮಿಸಿದ "ಪವರ್"

ಶನಿವಾರ, 30 ಆಗಸ್ಟ್ 2014 (11:34 IST)
ಪುನೀತ್ ರಾಜ್‌ಕುಮಾರ್ ಅಭಿನಯದ ಪವರ್  ಸಿನಿಮಾ ಬಾಕ್ಸ್‌ಆಫೀಸಿನಲ್ಲಿ ನೂತನ ದಾಖಲೆ ನಿರ್ಮಿಸಿದೆ. ರಿಲೀಸ್ ಆದ ಎರಡನೇ ದಿನಗಳಲ್ಲಿ ನಾಲ್ಕು ಕೋಟಿ ಕಲೆಕ್ಷನ್ ಮಾಡಿದೆ. ರಾಜ್ಯಾದ್ಯಂತ 261 ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಕಾರಣ ನೂತನ ದಾಖಲೆ ನಿರ್ಮಿಸಲು ಸಾಧ್ಯವಾಗಿದೆ ಎಂದು ಹೇಳಲಾಗುತ್ತಿದೆ.

 ಸಿನಿಮಾ ತುಂಬಾ ಚೆನ್ನಾಗಿರುವುದರಿಂದ ಜನರು ಎಂಜಾಯ್ ಮಾಡ್ತಿದ್ದಾರೆ. ನಾವು ಹಾಕಿರುವ ಮೊತ್ತ ವಾಪಸ್ ಬಂದು ಲಾಭ ಸಿಗುವ ಸಾಧ್ಯತೆ ಕಂಡುಬರುತ್ತಿದೆ ಎಂದು ಚಿತ್ರವಿತರಕ ಪ್ರಸಾದ್ ಹೇಳಿದ್ದಾರೆ. ಪುನೀತ್ ರಾಜ್‌ಕುಮಾರ್ ಮನೋಜ್ಞ ಅಭಿನಯ ಮಾಡಿದ್ದಾರೆ.  

ಪವರ್‌ಸ್ಟಾರ್ ಪವರ್‌ಫುಲೀ ಬ್ಯಾಕ್,ಅವರೊಬ್ಬ ಮೃದುಸ್ವಭಾವಿ ಎಂದು ಪ್ರಸಾದ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ