ಪವರ್ ಸ್ಟಾರ್ ಅಪ್ಪು ಬಯೋಪಿಕ್ ತೆರೆಗೆ?

ಸೋಮವಾರ, 22 ನವೆಂಬರ್ 2021 (10:48 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಧನೆ ಎಷ್ಟೋ ಮಂದಿಗೆ ಪ್ರೇರಣೆಯಾಗಿದೆ. ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿ ನಮ್ಮನ್ನಗಲಿದ ಅಪ್ಪು ಬಗ್ಗೆ ಬಯೋಪಿಕ್ ಹೊರತರಲು ನಿರ್ದೇಶಕ ಸಂತೋಷ್ ಆನಂದ್ ರಾಮ್ ಚಿಂತನೆ ನಡೆಸಿದ್ದಾರಂತೆ.

ಪುನೀತ್ ಜೊತೆಗೆ ರಾಜಕುಮಾರ, ಯುವರತ್ನ ಮುಂತಾದ ಸಿನಿಮಾ ಮಾಡಿ ಯಶಸ್ವೀ ಕಾಂಬಿನೇಷನ್ ಎನಿಸಿಕೊಂಡಿದ್ದ ಸಂತೋಷ್ ಆನಂದ್ ರಾಮ್ ಪುನೀತ್ ಜೊತೆಗೆ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದರು.

ಆದರೆ ಈಗ ಅಪ್ಪುವೇ ನಮ್ಮ ಜೊತೆಗಿಲ್ಲ. ಆದರೆ ಅಪ್ಪು ಮೇಲಿನ ಅಭಿಮಾನದಿಂದ ಸಂತೋಷ್ ಅವರ ಬಯೋಪಿಕ್ ತೆರೆಗೆ ತರಲು ಚಿಂತನೆ ನಡೆಸಿದ್ದಾರಂತೆ. ಅಭಿಮಾನಿಯೊಬ್ಬರು ಟ್ವಿಟರ್ ನಲ್ಲಿ ಅಪ್ಪು ಬಯೋಪಿಕ್ ಮಾಡಿ ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಸಂತೋಷ್ ಆನಂದ್ ರಾಮ್ ಕೂಡಾ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಬಯೋಪಿಕ್ ತೆರೆಗೆ ತರಲು ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ