ಸುಧಾಮೂರ್ತಿ ಮೆಚ್ಚಿಕೊಂಡ ‘100’ ಸಿನಿಮಾ
ಮೊನ್ನೆಯಷ್ಟೇ ಬಿಡುಗಡೆಯಾಗಿರುವ 100 ಸಿನಿಮಾದಲ್ಲಿ ಸೈಬರ್ ಕ್ರೈಂ ಆಧಾರಿತ ಕತೆಯಿದೆ. ಇದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಚಿತ್ರ ಎಂದು ಸುಧಾಮೂರ್ತಿ ಕೊಂಡಾಡಿದ್ದಾರೆ.
ಇಡೀ ಕುಟುಂಬದವರು ಒಟ್ಟಾಗಿ ಕುಳಿತು 100 ಸಿನಿಮಾವನ್ನು ಎಂಜಾಯ್ ಮಾಡಬಹುದು. ರಮಶ‍್ ಅರವಿಂದ್ ನಟನೆಯ ಈ ಸಿನಿಮಾದಲ್ಲಿ ಸಮಾಜಕ್ಕೆ ಒಂದು ಕಲಿಕೆ ಇದೆ. ಇಂಟರ್ನೆಟ್ ಗೆ ಅಡಿಕ್ಟ್ ಆದವರು ಗೆಳೆತನ ಮಾಡುವುದು ತಪ್ಪಲ್ಲ. ಆದರೆ ಗೊತ್ತಿಲ್ಲದವರ ಬಳಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದು ತಪ್ಪು. ಇದರಿಂದ ಇಡೀ ಕುಟುಂಬಕ್ಕೆ ಏನೆಲ್ಲಾ ತೊಂದರೆಯಾಗಬಹುದು ಎಂದು ಚಿತ್ರದಲ್ಲಿ ವಿವರಿಸಲಾಗಿದೆ. ಈ ಚಿತ್ರವನ್ನು ಬಹಳ ಎಂಜಾಯ್ ಮಾಡಿದೆ ಎಂದು ಸುಧಾಮೂರ್ತಿ ಹೊಗಳಿದ್ದಾರೆ.