ಎರಡೇ ದಿನಕ್ಕೆ ನೂರು ಕೋಟಿ ದಾಟಿದ ಸಾಹೋ

ಸೋಮವಾರ, 2 ಸೆಪ್ಟಂಬರ್ 2019 (08:12 IST)
ಹೈದರಾಬಾದ್: ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಸಾಹೋ ಸಿನಿಮಾ ನೂರು ಕೋಟಿ ಕ್ಲಬ್ ಸೇರಿಕೊಂಡಿದೆ. ಅದೂ ಎರಡೇ ದಿನದಲ್ಲಿ ಎನ್ನುವುದು ವಿಶೇಷ.


ಗಣೇಶ ಹಬ್ಬ, ವೀಕೆಂಡ್ ರಜಾ ಸಾಹೋ ಸಿನಿಮಾ ಗಳಿಕೆ ಹೆಚ್ಚಿಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ. ಕರ್ನಾಟಕದಲ್ಲಿ ಅಷ್ಟೊಂದು ಪ್ರತಿಕ್ರಿಯೆ ಇಲ್ಲದೇ ಹೋದರೂ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಉತ್ತಮ ಪ್ರದರ್ಶನ ಕಂಡಿದೆ.

ಮೊದಲ ದಿನವೇ 65 ಕೋಟಿ ಗಳಿಕೆ ಮಾಡಿದ್ದ ಸಾಹೋ ಈಗ 100 ಕೋಟಿ ದಾಟಿ ಗಳಿಕೆ ಮಾಡಿದೆ. ಈ ಮೂಲಕ ಬಾಹುಬಲಿ ಮೂಲಕ ಪ್ರಭಾಸ್ ಮತ್ತೊಂದು ಸಿನಿಮಾ ನೂರು ಕೋಟಿ ಕ್ಲಬ್ ಸೇರಿಕೊಂಡಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ