ತೆಲುಗು ನಟ ಪ್ರಭಾಸ್ ಮಹಿಳಾ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್

ಸೋಮವಾರ, 5 ಡಿಸೆಂಬರ್ 2016 (12:14 IST)
ಹೈದರಾಬಾದ್: ಬಾಹುಬಲಿ ಚಿತ್ರದದಲ್ಲಿ ಕಟ್ಟು ಮಸ್ತಾದ ದೇಹದ ಪ್ರಭಾಸ್ ನೋಡಿ ಅದೆಷ್ಟು ಮಹಿಳಾ ಅಭಿಮಾನಿಗಳು ಅವರಿಗೆ ಫಿದಾ ಆಗಿದ್ದರು. ಈ ಮಿಸ್ಟರ್ ಬ್ರಹ್ಮಚಾರಿ ಈಗ ಮಹಿಳಾ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕೊಡುತ್ತಿದ್ದಾರೆ.

ಬಾಹುಬಲಿ ಪ್ರಾಜೆಕ್ಟ್ ಮುಗಿಯುವವರೆಗೂ ಮದುವೆ ಬಗ್ಗೆ ಚಿಂತಿಸುವುದಿಲ್ಲ ಎಂದಿದ್ದ ಪ್ರಭಾಸ್ ಈಗ ಮದುವೆಯತ್ತ ಮನಸ್ಸು ಮಾಡಿದ್ದಾರಂತೆ. ಅವರ ಕುಟುಂಬದವರು ಸೇರಿಕೊಂಡು ನೋಡಿದ ಹುಡುಗಿಯೊಬ್ಬರನ್ನು ಪ್ರಭಾಸ್ ಮದುವೆಯಾಗಲಿದ್ದಾರೆ ಎನ್ನುತ್ತಿವೆ ಮೂಲಗಳು.

ಸ್ವತಃ ಪ್ರಭಾಸ್ ತಮ್ಮ ಹುಡುಗಿಯ ಬಗ್ಗೆ ಗೆಳೆಯರಲ್ಲಿ ಹೇಳಿಕೊಂಡಿದ್ದಾರಂತೆ. ಆಕೆ ವಿಶಾಖಪಟ್ಟಣದವಳು. ದೊಡ್ಡ ಉದ್ಯಮಿಯೊಬ್ಬರ ಪುತ್ರಿ. ತನಗಾಗಿ ಮೂರು ವರ್ಷದಿಂದ ಕಾದಿದ್ದಾಳೆ ಎಂದು ಹುಡುಗಿಯ ಬಗ್ಗೆ ವಿವರ ಕೊಟ್ಟಿದ್ದಾರಂತೆ. ಆ ಅದೃಷ್ಟವಂತೆ ಯಾರು ಎನ್ನುವ ಗುಟ್ಟನ್ನು  ಅವರು ಬಿಟ್ಟುಕೊಟ್ಟಿಲ್ಲ. ಆದರೆ ಅವರ ಮಹಿಳಾ ಆರಾಧಕರಿಗಂತೂ ಇದು ಶುಭ ಸುದ್ದಿಯಲ್ಲ ಬಿಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ