ಬೆಂಗಳೂರು: ಸದ್ಯ ಫೌಜಿ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ 'ರೆಬೆಲ್' ಸ್ಟಾರ್ ಪ್ರಭಾಸ್ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣದ ವೇಳೆ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ವರದಿಗಳ ಪ್ರಕಾರ ನಟನಿಗೆ ಪಾದದ ಗಾಯವಾಗಿದೆ ಮತ್ತು ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ದುರದೃಷ್ಟವಶಾತ್ ಪ್ರಭಾಸ್ ಅವರು ಜಪಾನ್‌ನಲ್ಲಿ ಕಲ್ಕಿ 2898 AD ನ ಗ್ರ್ಯಾಂಡ್ ಪ್ರೀಮಿಯರ್ ಶೋನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಇದೀಗ ಜಪಾನ್‌ನಲ್ಲಿರುವ ಪ್ರಭಾಸ್ ಅವರ ಅಭಿಮಾನಿಗಳು ಈ ಸುದ್ದಿಯಿಂದ ನಿರಾಶೆಗೊಂಡಿದ್ದಾರೆ.
ನಿರ್ದೇಶಕ ನಾಗ್ ಅಶ್ವಿನ್ ಮತ್ತು ಇತರ ಪ್ರಮುಖ ತಾರಾಗಣ ಮತ್ತು ಸಿಬ್ಬಂದಿ ಈಗ ಜಪಾನ್‌ನಲ್ಲಿ ಪ್ರಚಾರ ಚಟುವಟಿಕೆಗಳನ್ನು ಮುನ್ನಡೆಸಲಿದ್ದಾರೆ.
ಕಲ್ಕಿ 2898 AD ಅನ್ನು ಡಿಸೆಂಬರ್ 18 ರಂದು ಅದರ ಜಪಾನೀಸ್ ಪ್ರಥಮ ಪ್ರದರ್ಶನಕ್ಕೆ ನಿಗದಿಪಡಿಸಲಾಗಿದೆ ಮತ್ತು ಜಪಾನೀಸ್ ಹೊಸ ವರ್ಷವನ್ನು ಗುರುತಿಸುವ ಉತ್ಸವಗಳಲ್ಲಿ ಜನವರಿ 3, 2025 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು.
ವೃತ್ತಿಪರವಾಗಿ, ಪ್ರಭಾಸ್ ಅವರು ಸಲಾರ್ 2, ಸ್ಪಿರಿಟ್, ಹನು ರಾಘವಪುಡಿ ಅವರ ಪ್ರಾಜೆಕ್ಟ್, ದಿ ರಾಜಾಸಾಬ್, ಕಲ್ಕಿ 2 ಮತ್ತು ಹೊಂಬಾಳೆ ಫಿಲ್ಮ್ಸ್‌ನೊಂದಿಗೆ ಇನ್ನೂ ಎರಡು ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.