ಉಸ್ತಾದ್ ಜಾಕಿರ್ ಹುಸೇನ್ ಸಾವಿಗೆ ಅದೊಂದೇ ಕಾರಣವಾಯ್ತಾ

Krishnaveni K

ಮಂಗಳವಾರ, 17 ಡಿಸೆಂಬರ್ 2024 (16:29 IST)
ಸ್ಯಾನ್ ಫ್ರಾನ್ಸಿಸ್ಕೊ: ಭಾರತದ ಖ್ಯಾತ ತಬಲಾ ಮಾಂತ್ರಿಕ, ಉಸ್ತಾದ್ ಜಾಕೀರ್ ಹುಸೇನ್ ಮೊನ್ನೆಯಷ್ಟೇ  ಅಮೆರಿಕಾದ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಇದ್ದ ಅಪರೂಪದ ಖಾಯಿಲೆ ಬಗ್ಗೆ ಈಗ ವೈದ್ಯರು ಮಾಹಿತಿ ನೀಡಿದ್ದಾರೆ.

ರಕ್ತದೊತ್ತಡ, ಹೃದಯ ಸಂಬಂಧೀ ಖಾಯಿಲೆಯಿಂದಾಗಿ ಉಸ್ತಾದ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿತ್ತು. ಆದರೆ ಇದಿಷ್ಟೇ ಅವರ ಸಾವಿಗೆ ಕಾರಣವಲ್ಲ. ಅವರ ಸಾವಿಗೆ ಈಡಿಯೊ ಪ್ಯಾಥೆಟಿಕ್ ಎಂಬ ಅನಾರೋಗ್ಯ ಕಾರಣ ಎಂದು ಈಗ ವೈದ್ಯರು ಹೇಳುತ್ತಿದ್ದಾರೆ. ಅಷ್ಟಕ್ಕೂ ಈ ಖಾಯಿಲೆ ಎಂದರೇನು ಇಲ್ಲಿ ನೋಡಿ.

ಈಡಿಯೊ ಪ್ಯಾಥೆಟಿಕ್ ಎಂದರೇನು
ಇದು ಶ್ವಾಸಕೋಶ ಸಂಕುಚಿತಗೊಳ್ಳುವ ಒಂದು ವಿಚಿತ್ರ ಖಾಯಿಲೆಯಾಗಿದೆ. ಇದರಿಂದಾಗಿ ವ್ಯಕ್ತಿಗೆ ಉಸಿರಾಟ ಕಷ್ಟವಾಗಿ ಕ್ರಮೇಣ ಸಾವನ್ನಪ್ಪುತ್ತಾನೆ. ಸಾಮಾನ್ಯವಾಗಿ ಇದು ಪಾರಿವಾಳಗಳಿಂದ ಹರಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಜಾಕೀರ್ ಹುಸೇನ್ ಅವರಿಗೂ ಇದೇ ಖಾಯಿಲೆ ಬಂದಿತ್ತು.

ಈ ಖಾಯಿಲೆಗೆ ಸೂಕ್ತ ಔಷಧಿ ಇದುವರೆಗೆ ಕಂಡುಹಿಡಿಯಲಾಗಲಿಲ್ಲ. ಈಗ ಲಭ್ಯವಿರುವ ಔಷಧಿಗಳಿಂದ ಈ ಖಾಯಿಲೆಯನ್ನು ಕೆಲವು ದಿನದವರೆಗೆ ತಳ್ಳಬಹುದಷ್ಟೇ ಎಂದು ತಜ್ಞರೇ ಹೇಳುತ್ತಾರೆ. ಈಗ ಜಾಕೀರ್ ಹುಸೇನ್ ಅವರಿಗೂ ಇದೇ ಸಮಸ್ಯೆ ಬಂದಿದ್ದರಿಂದಲೇ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ