ಪ್ರಶಾಂತ್ ನೀಲ್-ಪತ್ನಿಯ ಆನಿವರ್ಸರಿ ಪಾರ್ಟಿಯಲ್ಲಿ ಪ್ರಭಾಸ್
ಸದ್ಯಕ್ಕೆ ಪ್ರಶಾಂತ್ ನೀಲ್ ರೆಬಲ್ ಸ್ಟಾರ್ ಪ್ರಭಾಸ್ ಜೊತೆಗೆ ಸಲಾರ್ ಸಿನಿಮಾ ಮಾಡುತ್ತಿದ್ದಾರೆ. ಸಲಾರ್ ಸಿನಿಮಾ ಶೂಟಿಂಗ್ ಸೆಟ್ ನಲ್ಲಿಯೇ ಪ್ರಶಾಂತ್ ದಂಪತಿ ಆನಿವರ್ಸರಿ ಆಚರಿಸಿದ್ದಾರೆ.
ಹೀಗಾಗಿ ಸಲಾರ್ ಸಿನಿಮಾ ತಂಡ ಪಾರ್ಟಿಯಲ್ಲಿ ಭಾಗಿಯಾಗಿದೆ. ಪ್ರಭಾಸ್ ಕೂಡಾ ಪ್ರಶಾಂತ್ ದಂಪತಿ ಜೊತೆಗೆ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.