ರಾಜಕೀಯ ಸೇರ್ಪಡೆ ಬಗ್ಗೆ ಮೇ 28 ಕ್ಕೆ ಹೇಳಿಕೆ ನೀಡಲಿರುವ ಜ್ಯೂ.ಎನ್ ಟಿಆರ್

ಗುರುವಾರ, 4 ಮೇ 2023 (09:10 IST)
ಹೈದರಾಬಾದ್: ಇತ್ತಿಚೆಗಿನ ದಿನಗಳಲ್ಲಿ ಸ್ಟಾರ್ ನಟರು ಒಂದೊಂದು ರಾಜಕೀಯ ಪಕ್ಷ ಸೇರಿಕೊಳ್ಳುತ್ತಿರುವುದು ಟ್ರೆಂಡ್ ಆಗಿದೆ.

ಇದೀಗ ಜ್ಯೂ.ಎನ್ ಟಿಆರ್ ರಾಜಕೀಯ ಪ್ರವೇಶದ ಬಗ್ಗೆ ಸುದ್ದಿ ಕೇಳಿಬರುತ್ತಿದೆ. ಮೇ 28 ರಂದು ಎನ್ ಟಿ ರಾಮರಾವ್ ಅವರ ಕಂಚಿನ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ. ಇದಾದ ಬಳಿಕ ಜ್ಯೂ.ಎನ್ ಟಿಆರ್ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಹತ್ವದ ಹೇಳಿಕೆ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ಜ್ಯೂ.ಎನ್ ಟಿಆರ್ ರಾಜಕೀಯ ಪ್ರವೇಶದ ಬಗ್ಗೆ ಹಲವು ದಿನಗಳಿಂದ ವದಂತಿಗಳು ಹರಡಿವೆ. ಇವೆಲ್ಲದಕ್ಕೂ ಮೇ 28 ರಂದು ಎನ್ ಟಿ ರಾಮರಾವ್ ಜಯಂತಿಯಂದು ಉತ್ತರ ಸಿಗುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ