ಉದ್ಯಮಿಯ ಪುತ್ರಿಯ ಜತೆ ಪ್ರಭಾಸ್ ಮದುವೆ?!

ಮಂಗಳವಾರ, 6 ಆಗಸ್ಟ್ 2019 (10:17 IST)
ಹೈದರಾಬಾದ್: ಬಾಹುಬಲಿ ಖ್ಯಾತಿಯ ಪ್ರಭಾಸ್ ಮದುವೆ ಬಗ್ಗೆ ಮತ್ತೆ ರೂಮರ್ ಹಬ್ಬಿದೆ. ಪ್ರಭಾಸ್ ಉದ್ಯಮಿ ಪುತ್ರಿಯೊಬ್ಬರ ಕೈ ಹಿಡಿಯಲಿದ್ದಾರೆ ಎಂಬ ಸುದ್ದಿ ಬಂದಿದೆ.


ಅಮೆರಿಕಾ ಮೂಲದ ಉದ್ಯಮಿಯೊಬ್ಬರ ಪುತ್ರಿಯ ಜತೆ ವಿವಾಹವಾಗಲಿದ್ದಾರೆ. ಸಾಹೋ ಸಿನಿಮಾ ಬಿಡುಗಡೆ ನಂತರ ಈ ಬಗ್ಗೆ ಅನೌನ್ಸ್ ಮಾಡಬಹುದು ಎಂಬ ಸುದ್ದಿ ಓಡಾಡುತ್ತಿದೆ.

ಆದರೆ ಇದು ನಿಜವಲ್ಲ ಎಂದು ಪ್ರಭಾಸ್ ಆಪ್ತ ಮೂಲಗಳು ಹೇಳುತ್ತಿವೆ. ಪ್ರಭಾಸ್ ಗೆ ಸದ್ಯಕ್ಕೆ ವಿವಾಹವಾಗುವ ಯೋಜನೆಯಿಲ್ಲ ಎಂದು ಅವರ ಸಂಬಂಧಿಕರೊಬ್ಬರು ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ. ಆದರೆ ಆಗಾಗ ಪ್ರಭಾಸ್ ಮದುವೆ ಬಗ್ಗೆ ಗಾಸಿಪ್ ಹುಟ್ಟಿಕೊಳ್ಳುವುದು ಮಾತ್ರ ಸುಳ್ಳಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ