ತಮಿಳು ನಟ ವಿಜಯ್ ಗೆ ಶ್ರದ್ಧಾಂಜಲಿ ಹೇಳಿದವರ ವಿರುದ್ಧ ಕಿಡಿ ಕಾರಿದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್
ದೇಶದಲ್ಲಿ ನೆರೆ, ಬರ ಮುಂತಾದ ಹಲವು ವಿನಾಶಗಳಿಂದ ದೇಶ ಸಂಕಷ್ಟದಲ್ಲಿದೆ. ಇದರ ಬಗ್ಗೆ ಮಾತನಾಡುವುದು ಬಿಟ್ಟು ಕೆಲವರಿಗೆ ವಿಜಯ್ ಆರ್ ಐಪಿ ಎಂದು ಟ್ರೆಂಡ್ ಮಾಡುವುದರಲ್ಲೇ ಆಸಕ್ತಿ ಹೆಚ್ಚಿದಂತಿದೆ ಎಂದು ಅಶ್ವಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯ್ ಅಭಿಮಾನಿಗಳೂ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಕಿಡಿ ಕಾರಿದ್ದಾರೆ. ಇಂತಹ ಸುದ್ದಿಗಳನ್ನು ಟ್ರೆಂಡ್ ಮಾಡುವುದನ್ನು ಮೊದಲು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.