ಬರ್ತ್ ಡೇ ಬಾಯ್ ಪ್ರಜ್ವಲ್ ದೇವರಾಜ್ ಮುಂಬರುವ ಸಿನಿಮಾಗಳ ಲಿಸ್ಟ್
ಸಿಕ್ಸರ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಪ್ರಜ್ವಲ್ ಇದುವರೆಗೆ 30 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರ ಕೈಯಲ್ಲಿ ಬಿಡುಗಡೆಯಾಗಬೇಕಿರುವ ನಾಲ್ಕು ಸಿನಿಮಾಗಳಿವೆ.
ಈ ಪೈಕಿ ಅಬ್ಬರ ಮತ್ತು ವೀರಂ ಚಿತ್ರ ತೆರೆಗೆ ಬರಲು ರೆಡಿಯಾಗಿವೆ. ಉಳಿದಂತೆ ಮಾಫಿಯಾ ಮತ್ತು ಗಣ ಚಿತ್ರೀಕರಣದ ಹಂತದಲ್ಲಿದೆ. ಎರಡು ಸಿನಿಮಾಗಳು ಈ ವರ್ಷ ತೆರೆ ಕಾಣುವುದು ಖಚಿತ. ಗಲ್ಲಾಪೆಟ್ಟಿಗೆಯಲ್ಲಿ ಹಾಕಿದ ಬಂಡವಾಳಕ್ಕೆ ಮೋಸವಿಲ್ಲದೇ ಗಳಿಸಿಕೊಡುವ ಪ್ರಜ್ವಲ್ ಕನ್ನಡ ಚಿತ್ರರಂಗದ ಭರವಸೆಯ ನಟ ಎನ್ನುವುದನ್ನು ನಿರೂಪಿಸಿದ್ದಾರೆ.