ಜೈ ಭೀಮ್ ಸಿನಿಮಾದಲ್ಲಿ ಕಪಾಳಮೋಕ್ಷ ಸೀನ್: ಪ್ರಕಾಶ್ ರಾಜ್ ಪ್ರತಿಕ್ರಿಯೆ ನೋಡಿ!
ಇದೀಗ ಆ ವಿವಾದದ ಬಗ್ಗೆ ಪ್ರಕಾಶ್ ರಾಜ್ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ದೃಶ್ಯದ ಬಗ್ಗೆ ಆಕ್ಷೇಪಿಸಿದವರಿಗೆ ತಮ್ಮದೇ ಅಜೆಂಡಾವಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ಪ್ರಕಾಶ್ ರಾಜ್ ತಿರುಗೇಟು ಕೊಟ್ಟಿದ್ದಾರೆ.
ಸಿನಿಮಾದಲ್ಲಿ ಬುಡಕಟ್ಟು ಜನಾಂಗದವರ ದುಸ್ಥಿತಿ ಬಗ್ಗೆ ಬೆಳಕು ಚೆಲ್ಲಲಾಗಿದೆ. ಆ ಸಮಸ್ಯೆ ಬಗ್ಗೆ ಚಿಂತಿಸದೇ ಹಿಂದಿ ಭಾಷಿಕನಿಗೆ ಹೊಡೆದಿದ್ದನ್ನೇ ದೊಡ್ಡ ವಿವಾದ ಮಾಡಿದವರ ಮನಸ್ಥಿತಿ ಇದರಲ್ಲೇ ಬಯಲಾಗುತ್ತದೆ. ಇಂತಹವರ ಉದ್ದೇಶವೇನೆಂದು ಬಯಲಾಗಿದೆ ಎಂದು ಪ್ರಕಾಶ್ ರಾಜ್ ತಿರುಗೇಟು ಕೊಟ್ಟಿದ್ದಾರೆ.