ಪ್ರಿಯದರ್ಶನ್ ಮುಂದಿನ ಚಿತ್ರಕ್ಕೆ ಪ್ರಕಾಶ್ ರಾಜ್ ಆಯ್ಕೆ

ಮಂಗಳವಾರ, 7 ಜುಲೈ 2015 (10:53 IST)
ಕಾಂಚಿವರಮ್ ಚಿತ್ರ 2008ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಚಿತ್ರ. ಈ ಚಿತ್ರದಲ್ಲಿ ಪ್ರಕಾಶ್ ರಾಜ್ ನಟಿಸಿದ್ದರು. ಅದು ಹಳೆಯ ಕಥೆ ಈಗ ಹೊರಬಂದಿರುವ ಹೊಸಕಥೆ ಏನೆಂದರೇ ನಟ ಪ್ರಕಾಶ್ ರಾಜ್ ಮತ್ತು ಪ್ರಿಯದರ್ಶನ್ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡಲು ಸಿದ್ಧತೆ ನಡೆಸಿದ್ದಾರೆ. ಅಂದರೆ ಪ್ರಿಯದರ್ಶನ್ ಅವರು ತಮ್ಮ ಮುಂದಿನ ಚಿತ್ರಕ್ಕೆ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.ಇದು ಭಾರಿ ಸೆಂಟಿಮೆಂಟ್ ಕಥಾಹಂದರ ಹೊಂದಿರುವ ಚಿತ್ರವಂತೆ.  
ಪ್ರಕಾಶ್ ಮತ್ತು ಪ್ರಿಯದರ್ಶನ್  ಭೇಟಿ ಆಗಿದ್ದಲ್ಲದೆ ಚಿತ್ರಕಥೆಯನ್ನು ನಿರ್ದೇಶಕರು ಈ ಪ್ರತಿಭಾವಂತ ನಟನಿಗೆ ನೀಡಿದರಂತೆ. ಅದನ್ನು ಓದಿದ ಬಳಿಕ  ಪ್ರಕಾಶ್ ಅವರಿಗೆ ಕಥೆ ಬಹಳ ಇಷ್ಟ ಆಯ್ತಂತೆ. ಅತ್ಯಂತ ಭಾವನಾತ್ಮಕ ಸಂಗತಿಗಳನ್ನು ಹೊಂದಿರುವ ಈ ಚಿತ್ರದಲ್ಲಿ ನಟಿಸಲು ಪ್ರಕಾಶ್ ಅವರ ಕಡೆಯಿಂದ ಸಮ್ಮತಿ ಮುದ್ರೆ ಸಿಕ್ಕಿದೆಯಂತೆ. ಒಟ್ಟಾರೆ ಅಂತೆ ಕಂತೆಗಳಿವೆ, ಆದರೆ ಅದರ ನೈಜತೆ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಬಿಡಿ.. ಸಿನಿಮಾಗೆ ಬಂದೂರು ಸುದ್ದಿಗೆ ಮಾಡದೆ ಇರ್ತಾರಾ ?

ವೆಬ್ದುನಿಯಾವನ್ನು ಓದಿ