ಬೆತ್ತಲೆಯಾಗಿ ನಟಿಸಲು ಪ್ರಣೀತ ಆಸಕ್ತಿ ?

ಸೋಮವಾರ, 10 ನವೆಂಬರ್ 2014 (09:27 IST)
ಕನ್ನಡ ಚಿತ್ರರಂಗದಲ್ಲಿ ತನ್ನ ಕೆರಿಯರ್ ಆರಂಭ ಮಾಡಿದ ನಟಿ ಪ್ರಣೀತ  ಸುಭಾಷ್. ಆ ಬಳಿಕ ಈ ಕನ್ನಡದ ಹುಡುಗಿಯನ್ನು ತೆಲುಗು ಚಿತ್ರರಂಗ ಕರೆಯಿತು. ಪವನ್ ಕಲ್ಯಾಣ್ ಜೊತೆ ಅಭಿನಯಿಸಿದ ಅತ್ತಾರಿಂಟಿಕಿ ದಾರೇದಿ  ಚಿತ್ರದ ಯಶಸ್ಸು ಆಕೆಗೆ ಅನೇಕ ಅವಕಾಶಗಳು ಸಿಗುವಂತೆ ಮಾಡಿದವು. ಆಕೆ ಕೇವಲ ಟಾಲಿವುಡ್ ಮಾತ್ರವಲ್ಲ ಕಾಲಿವುಡ್ ನಲ್ಲೂ ಸಹಿತ ತನ್ನ ಅಭಿನಯ ತೋರುವುದಕ್ಕೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬಂದಿವೆ.

ಇತ್ತೀಚಿನ  ದಿನಗಳಲ್ಲಿ ಚಿತ್ರರಂಗದವರು ನಟಿಯರ ಅಭಿನಯಕ್ಕಿಂತ ಅವರ ದೇಹಸಿರಿಯನ್ನು ಹೆಚ್ಚು ಹೆಚ್ಚು ತೋರಿಸಲು, ಆ ಮೂಲಕ ಹಣ ಪ್ರೇಕ್ಷಕರಿಂದ ವಸೂಲಿ ಮಾಡಲು ಗಮನ ನೀಡುತ್ತಿದ್ದಾರೆ. ಇದರಲ್ಲಿ ಕಾಲಿವುಡ್ ಮಂದಿ ತುಂಬಾ ಮುಂದೆ ಇದ್ದಾರೆ. ಅವರು ಹೀರೋಯಿನ್ ಗಳ ರಾಶಿ ರಾಶಿ ರೂಪವನ್ನು ತೆರೆಯಮೇಲೆ ತೋರಿಸಿ ತಮ್ಮ ವಿಶೇಷತೆಯನ್ನು ತೋರುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಸಮಂತಳನ್ನು ಸಹ ಆಕೆಯು ಈವರೆಗೂ  ನಟಿಸದೆ ಇದ್ದುದಕ್ಕಿಂತ ಭಿನ್ನವಾಗಿ ಅಂಜಾನ್ ಚಿತ್ರದಲ್ಲಿ ತೋರಿಸಲಾಗಿತ್ತು. 
 
ಸೂರ್ಯ, ಸಮಂತ ಹಾಗೂ ಹಾಟ್ ಹಾಟ್ ಸಿನ್ ಗಳಿದ್ದರು ಸಹಿತ ಅದ್ಯಾಕೋ ಆ ಚಿತ್ರ ಗೆಲುವು ಕಾಣಲೇ ಇಲ್ಲ. ಈಗ ಪ್ರಣೀತಳನ್ನು ಹಾಟ್ ಹಾಟಾಗಿ ತೋರಿಸಲು ಕಾಲಿವುಡ್ ನಿರ್ಮಾಪಕರು ಮುಂದೆ ಬಂದಿದ್ದಾರೆ.ಆಕೆಯ ನಟನೆಯ ಚಿತ್ರದಲ್ಲಿ ದೊಡ್ಡ ಮೊತ್ತದ ಹಣ ನೀಡುತ್ತಿದ್ದಾರೆ ನಿರ್ಮಾಪಕರು. ಅದಕ್ಕೆಂದು ಈಕೆ  ಅರೆನಗ್ನಳಾಗಿ ನಟಿಸುವುದಕ್ಕೆ ಆದ್ಯತೆ ನೀಡ್ತಾ ಇದ್ದಾಳಂತೆ. ಕಾರ್ತಿ ಅಭಿನಯದ ಚಿತ್ರದಲ್ಲಿ ಪ್ರಣೀತಾಗೆ ಅವಕಾಶ ಸಿಕ್ಕಿದ್ದು ಈಕೆಯ ಈ ನಗ್ನ ರೂಪದಿಂದಾದರೂ ಗೆಲುವು ಕೈಹಿಡಿಯುತ್ತಾ ಎನ್ನುವುದು ಚಿತ್ರರಂಗದ ಆಕೆಯ ವಿರೋಧಿಗಳ ಕುಹಕ! 

ವೆಬ್ದುನಿಯಾವನ್ನು ಓದಿ