ಕೆಜಿಎಫ್ 2 ಗಿಂತಲೂ ಅದ್ಧೂರಿಯಾಗಿರಲಿದೆ ಸಲಾರ್

ಗುರುವಾರ, 12 ಮೇ 2022 (08:30 IST)
ಹೈದರಾಬಾದ್: ಕೆಜಿಎಫ್ 2 ಸಿನಿಮಾದ ಅದ್ಧೂರಿ ಮೇಕಿಂಗ್, ಆಕ್ಷನ್ ನೋಡುಗರ ಮೈನವಿರೇಳಿಸಿತ್ತು. ಈಗ ಪ್ರಶಾಂತ್ ನೀಲ್ ಸಲಾರ್ ಸಿನಿಮಾವನ್ನು ಅದಕ್ಕಿಂತ ಅದ್ಧೂರಿಯಾಗಿ ಮಾಡಲು ಹೊರಟಿದ್ದಾರಂತೆ.

ಕೆಜಿಎಫ್ ಸಿನಿಮಾ ಮೂಲಕ ಪ್ರಶಾಂತ್ ನೀಲ್ ತಾಂತ್ರಿಕ ಚಾಣಕ್ಷ್ಯತನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಸಲಾರ್ ನಲ್ಲಿ ಅದಕ್ಕಿಂತಲೂ ಅದ್ಧೂರಿ, ಥ್ರಿಲ್ಲಿಂಗ್ ಆಕ್ಷನ್ ದೃಶ್ಯಗಳನ್ನು ತೋರಿಸಲು ಪ್ರಶಾಂತ್ ನೀಲ್ ಸಿದ್ಧತೆ ನಡೆಸಿದ್ದಾರಂತೆ.

ಹೊಂಬಾಳೆ ಫಿಲಂಸ್ ನಿರ್ಮಾಣದ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ನಾಯಕರಾಗಿ ಅಭಿನಯಿಸುತ್ತಿದ್ದು, ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ