ಜ್ಯೂ. ಎನ್ ಟಿಆರ್ ಜೊತೆ ಸಿನಿಮಾ ಮಾಡುತ್ತಿರುವ ಬಗ್ಗೆ ಸುಳಿವು ಕೊಟ್ಟ ಪ್ರಶಾಂತ್ ನೀಲ್

ಗುರುವಾರ, 21 ಮೇ 2020 (10:47 IST)
ಬೆಂಗಳೂರು: ಕೆಜಿಎಫ್ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ಸಿನಿಮಾ ತೆಲುಗು ಸೂಪರ್ ಸ್ಟಾರ್ ಜ್ಯೂ. ಎನ್ ಟಿಆರ್ ಜತೆಗೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಹರಿದಾಡಿತ್ತು. ಆ ಸುದ್ದಿಗೆ ಪುಷ್ಠಿ ಕೊಡುವಂತೆ ಪ್ರಶಾಂತ್ ನೀಲ್ ಟ್ವೀಟ್ ಒಂದನ್ನು ಮಾಡಿದ್ದಾರೆ.


ಜ್ಯೂ. ಎನ್ ಟಿಆರ್ ಹುಟ್ಟುಹಬ್ಬಕ್ಕೆ ಶುಭ ಕೋರಿ ಟ್ವೀಟ್ ಮಾಡಿರುವ ಪ್ರಶಾಂತ್ ನೀಲ್ ‘ಕೊನೆಗೂ ನನಗೆ ನ್ಯೂಕ್ಲಿಯರ್ ಪ್ಲಾಂಟ್ ಬಳಿ ಕೂತರೆ ಎಷ್ಟು ಶಾಖ ತಗುಲುತ್ತೆ ಅಂತ ಗೊತ್ತಾಯ್ತು’ ಎಂದಿದ್ದಾರೆ. ಆ ಮೂಲಕ ಅವರ ಜತೆಗೂಡಿರುವ ಸುಳಿವು ನೀಡಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಲ್ಲಿ ಬಹುಕೋಟಿ ವೆಚ್ಚದಲ್ಲಿ ಜ್ಯೂ. ಎನ್ ಟಿಆರ್ ನಾಯಕರಾಗಿರುವ ಸಿನಿಮಾವೊಂದನ್ನು ಪ್ರಶಾಂತ್ ನೀಲ್ ನಿರ್ದೇಶಿಸಲಿದ್ದಾರೆ. ಈ ಸಿನಿಮಾ ಕೆಜಿಎಫ್ 2 ಬಳಿಕ ಸೆಟ್ಟೇರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ